ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕಾರ್ಣಿಕೋತ್ಸವ ಭಾನುವಾರ ಜರುಗಿತು.
ಕಾರ್ಣಿಕೋತ್ಸವದಲ್ಲಿ ಮೂಕ ಪ್ರಾಣಿಗಳಿಗೆ ಕುಂದಾಯಿತು ತುಂಬಿದ ಕೊಡ ಮೂರು ಭಾಗವಾಯಿತು. ಸಂತೋಷದ ದೀನ್ ಎಂದು ಸ್ವಾಮಿಯ ಸೇವಕ ಶ್ರೀ ಚೌಡದಾಪುರ ಯಮನೂರು ಸ್ವಾಮಿಯ ಕೆಂಡವನ್ನು ಆಯ್ದು ಸಿಡಿ ಕಂಬವನ್ನು ಏರಿ ಶಾಂತ ಚಿತ್ತತೆಯಿಂದ ಎಲ್ಲರನ್ನು ಗಮನಿಸಿ ಮೇಲಿನಂತೆ ಮೂರು ಬಾರಿ ಕಾರ್ಣಿಕೋತ್ಸವ ಹೇಳಿದರು.
ಮೊಹರಂ ಪ್ರಯುಕ್ತ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗಿ ಮೊದಲು ಸ್ವಾಮಿಯು ಗಂಗೆ ಕಾರ್ಯಕ್ರಮ, ಹಾಗೆ ನೀರಿನಲ್ಲಿ ದೀಪ ಹಚ್ಚುವುದು, ಪಟಾಕ್ಷಿ ಹರಾಜು ಕಾರ್ಯಕ್ರಮ, ಹಾಗೂ ರಿವಾಯತ್ ಪದವನ್ನು ಬಡೇಸಾಬ್ ತಂಡದವರು ಮಧ್ಯರಾತ್ರಿ ಇಂದ ಬೆಳಗಿನ ಜಾವದವರೆಗೆ ಹಾಡಿ ಮೊಹರಂಗೆ ಮೆರುಗು ತಂದರು. ಗ್ರಾಮದ ಸುತ್ತ್ತಲಿನ ಗ್ರಾಮಸ್ಥರು ಭಾಗಿಯಾಗಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು. ಬಳಿಕ ಸಂಜೆ ದೇವರ ಮೂರ್ತಿಗಳು ಹೊಳೆಗೆ ಮೆರವಣಿಗೆ ಮೂಲಕ ಹೋದವು.