ಬಾಚಿಗೊಂಡನಹಳ್ಳಿಯಲ್ಲಿ ಭಾನುವಾರ ಟಗರು ಕಾಳಗದ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ, ಭೋವಿ ಪ್ರಕಾಶ್ ಇತರರಿದ್ದರು. 
ಜಿಲ್ಲೆ

ಬಾಚಿಗೊಂಡನಹಳ್ಳಿಯಲ್ಲಿ ಟಗರು ಕಾಳಗ

ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದಲ್ಲಿ ರಾಜ್ಯಮಟ್ಟದ ಟಗರು ಕಾಳಗ ಸ್ಪರ್ಧೆ ಆಯೋಜಿಸುವುದು ಸಾಮಾನ್ಯ ಮಾತಲ್ಲ ಎಂದು ಬಿಜೆಪಿ ಹಿಂದುಳಿದ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಹೇಳಿದರು.

ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಕುರಿಗಾಹಿಗಳ ಸಂಘ ಆಯೋಜಿಸಿದ್ದ ಟಗರು ಕಾಳಗದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು. 200 ಟಗರುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಕೂಡ್ಲಿಗಿ ತಾಲೂಕು ಕಾನಹಳ್ಳಿಯ ಶ್ರೀ ದುರ್ಗಾಂಬಿಕಾ ಟಗರು ಪ್ರಥಮ ಸ್ಥಾನ ಗಳಿಸಿ 1 ಲಕ್ಷ ರೂ. ಬಹುಮಾನ ಪಡೆದಿದೆ.

ಹಬೊಹಳ್ಳಿ ಗೋಸ್ಟ್ ಮತ್ತು ಸುಲ್ತಾನ್ ಎಂಬ ಟಗರುಗಳು ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದು, ಕ್ರಮವಾಗಿ 50 ಸಾವಿರ ರೂ. ಹಾಗೂ 20 ಸಾವಿರ ರೂ. ಬಹುಮಾನ ಪಡೆದಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಹಾಗೂ ಹಾಲಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಪುಟ್ಟಗ್ರಾಮದಲ್ಲಿ ಕುರಿಗಾರರ ಸಂಘ ರಾಜ್ಯ ಮಟ್ಟದ ಟಗರು ಕಾಳಗ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಗ್ರಾಮೀಣ ಜನ ಜೀವನದಲ್ಲಿ ಹಾಸುಹೊಕ್ಕಾಗಿರುವ ಇಂತಹ ಕ್ರೀಡೆಗಳು ನಶಿಸಿ ಹೋಗಬಾರದು ಎಂದರು.