ಜಿಲ್ಲೆ

ಜಿಐಟಿಯಲ್ಲಿ ವೆಬಿನಾರ್ ಇ-ರಸಪ್ರಶ್ನೆ ಸ್ಪರ್ಧೆ ನಾಳೆ

Belagavi

ಬೆಳಗಾವಿ: ಕೆಎಲ್‌ಎಸ್ ಜಿಐಟಿ ನ್ಯಾನೊ ಕ್ಲಬ್, ನ್ಯಾನೋ ಟೆಕ್ನಾಲಜಿ ಕರೆಂಟ್ ಮತ್ತು ಫ್ಯೂಚರ್ ಟ್ರೆಂಡ್ಸ್ ಕುರಿತ ವೆಬಿನಾರ್ ಮತ್ತು ಇ-ರಸಪ್ರಶ್ನೆ ಸ್ಪರ್ಧೆ ಆ.8ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ವಿಚಾರ ಮತ್ತು ವಿಶ್ಲೇಷಣಾತ್ಮಕ ಚಿಂತನಾ ಮನೋಭಾವ ಬೆಳೆಸುವ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸುಧಾರಿತ ಪರಿಕಲ್ಪನೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಕೆಎಲ್‌ಎಸ್ ಜಿಐಟಿ ವಿದ್ಯಾರ್ಥಿಗಳು ಮತ್ತು ನ್ಯಾನೋ ಕ್ಲಬ್‌ನ ಬೋಧನಾ ವಿಭಾಗದ ಸಂಯೋಜಕರು ಅಧಿವೇಶನ ನಡೆಸಲಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ ಡಾ.ರವಿರಾಜ್ ಎಂ. ಕುಲಕರ್ಣಿ (ಮೊ. 7019572324) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.