ದೇವದುರ್ಗದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಕೃಷ್ಣಕುಮಾರ, ಸೋಫಿಸಾಬ್ ಉದ್ದಾರ್, ಮಾಧವರಾವ್, ಕೇಶವಮೂರ್ತಿ, ಸುನೀಲ್‌ಕುಮಾರ್, ಗಂಗಮ್ಮ ಬಿಮೋಜಿರಾವ್ ಇತರರಿದ್ದರು. 
ಜಿಲ್ಲೆ

ದೇವದುರ್ಗದಲ್ಲಿ ಮೂಲ ಸೌಕರ್ಯ ಕಲ್ಪಿಸಿ

ದೇವದುರ್ಗ: ಪಟ್ಟಣದಲ್ಲಿ ಸಾರ್ವಜನಿಕರ ವಿಶ್ರಾಂತಿಗಾಗಿ ಸುಸಜ್ಜಿತ ಉದ್ಯಾನ ನಿರ್ಮಿಸುವಂತೆ ಒತ್ತಾಯಿಸಿ ಶಾಸಕಿ ಕರೆಮ್ಮ ಜಿ.ನಾಯಕಗೆ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ಪಟ್ಟಣದಲ್ಲಿ 28ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, ಮೂಲ ಸೌಲಭ್ಯಗಳ ಕೊರತೆಯಿದೆ. ಮಕ್ಕಳು, ಮಹಿಳೆಯರು, ವೃದ್ಧರು ವಿಶ್ರಾಂತಿ ಪಡೆಯಲು ಹಾಗೂ ವ್ಯಾಯಾಮ ಮಾಡಲು ಸೂಕ್ತ ಉದ್ಯಾನದ ಕೊರತೆಯಿದೆ. ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಉದ್ಯಾನ ನಿರ್ಮಾಣ ಮಾಡಬೇಕು. ಹಲವು ಕಡೆ ಸಾರ್ವಜನಿಕ ಶೌಚಗೃಹಗಳ ಕೊರತೆಯಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ವಿದ್ಯುತ್ ಕಂಬ ಅಳವಡಿಸಿ

ಜೆಪಿ ವೃತ್ತದಿಂದ ಅಂಬೇಡ್ಕರ್ ವೃತ್ತ ಹಾಗೂ ವಿವಿಧ ಬಡಾವಣೆಯಲ್ಲಿ ಡಿವೈಡರ್ ನಿರ್ಮಿಸಿ ಸುಸಜ್ಜಿತ ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಬೇಕು. ಜನರು ಹೆಚ್ಚಾಗಿ ಓಡಾಡುವ ಕಡೆ ಶೌಚಗೃಹ ನಿರ್ಮಿಸಬೇಕು. ಪಟ್ಟಣದ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ವಿನೋದ್ ಕುಮಾರ, ಶಂಕ್ರಯ್ಯ, ಮರಿಗೆಯ್ಯ, ಶಿವಕುಮಾರ ಹಿರೇಮಠ, ಮನೋಹರ್, ರಂಗಯ್ಯ, ಅಬ್ದುಲ್ ಅಜೀಜ್ ಇತರರಿದ್ದರು.