ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ರಝೀನ್ ಅಹ್ಮದ್ ಜಮಾದಾರ್, ಮಂಥನ ಗರೆ, ಋತ್ವಿಕ್ ರಾವ್, ಜ್ಞಾನೇಶ್ವರಿ ಧುಡುಂ, ವೈಷ್ಣವಿ ಲೋಹಾರ ಅವರೊಂದಿಗೆ ಆರ್‌ಎಲ್‌ಎಸ್ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯರು, ಉಪ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಉಪನ್ಯಾಸಕರು ಇದ್ದಾರೆ. 
ಜಿಲ್ಲೆ

ಬಾಕ್ಸಿಂಗ್‌ನಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ನಗರದ ಸೆಂಟ್ ಜೋಸ್ೆ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಜರುಗಿದ 2024-25ನೇ ಸಾಲಿನ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಬಾಲಕರ ತಂಡದಲ್ಲಿ ರಝೀನ್ ಅಹ್ಮದ್ ಜಮಾದಾರ್ (75ಕೆಜಿ), ಮಂಥನ ಗರೆ (69ಕೆಜಿ), ಋತ್ವಿಕ್ ರಾವ್ (104 ಕೆಜಿ), ಜ್ಞಾನೇಶ್ವರಿ ಧುಡುಂ (57 ಕೆಜಿ) ಚಿನ್ನದ ಪದಕ ಪಡೆದು, ರಾಜ್ಯಮಟ್ಟದ ಬಾಕ್ಸಿಂಗ್‌ಗೆ ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದ ಕರಾಟೆಯಲ್ಲಿ ವೈಷ್ಣವಿ ಲೋಹಾರ ರಜತ ಪದಕ ಪಡೆದಿದ್ದಾಳೆ.

ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸರ್ವಸದಸ್ಯರು, ಪ್ರಾಚಾರ್ಯರು, ಉಪಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.