ರಾಜ್ಯ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆಗೈದ ಶಶಾಂಕ ಪಾಟೀಲ, ವಿಜಯ ಸಾವತಕರ, ಸ್ಪುರ್ಹಾ ನಾಯಕ. 
ಜಿಲ್ಲೆ

ಅಥ್ಲೆಟಿಕ್ಸ್‌ನಲ್ಲಿ ಲಿಂಗರಾಜ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಬೆಳಗಾವಿ: ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಶಶಾಂಕ ಪಾಟೀಲ ಮತು ವಿಜಯ ಸಾವತಕರ ಚಿನ್ನದ ಪದಕ ಗೆದ್ದಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಪುರುಷರ ಜಾವಲಿನ್ ಥ್ರೋನಲ್ಲಿ ಶಶಾಂಕ ಪಾಟೀಲ 66.12 ಮೀ. ಎಸೆದು ಅಗ್ರಸ್ಥಾನ ಪಡೆದರು. ವಿಜಯ ಸಾವತಕರ 5,000 ಮತ್ತು 10,000 ಮೀ. ಓಟದ ಸ್ಪರ್ಧೆಯಲ್ಲಿ 15:30.6, 32:36.7 ಸೆಕೆಂಡ್‌ನಲ್ಲಿ ಕ್ರಮಿಸಿ ಅಗ್ರಸ್ಥಾನ ಪಡೆದರು. ಸ್ಪುರ್ಹಾ ನಾಯಕ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ, ಶಿವಮಣಿ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ, ಭೂಷನ್ ಪಾಟೀಲ 400 ಮೀ. ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಪಡೆದರು. ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಜಿಮಖಾನಾ ಉಪಾಧ್ಯಕ್ಷ ವಿನಾಯಕ ವರುಟೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮಾರಾವ್, ತರಬೇತುದಾರ ಸಂಜೀವ ನಾಯಕ, ಸಿಬ್ಬಂದಿ ಅಭಿನಂದಿಸಿದರು.