ಅರಟಾಳ: ಗ್ರಾಮದಲ್ಲಿ ಶನಿವಾರ ವಿಜೃಂಭಣೆಯಿಂದ ಓಕುಳಿ ಆಚರಿಸಲಾಯಿತು. ಓಕುಳಿ ನಿಮಿತ್ತ ಬೆಳಗ್ಗೆ ಹನುಮಂತ ದೇವರಿಗೆ ಅಭಿಷೇಕ, ಮಹಾಪೂಜೆ, ನೈವೇದ್ಯ, ಸಂಜೆ 5 ಗಂಟೆಗೆ ನೀರೋಕುಳಿ ಜರುಗಿತು.
ಗ್ರಾಮದ ಯುವಕರು ಓಕುಳಿ ಕಂಬಕ್ಕೆ ನೀರು ಎರಚುವ ಮೂಲಕ ಎಲ್ಲರನ್ನೂ ಮನರಂಜಿಸಿದರು. ಓಕುಳಿ ದೃಶ್ಯ ಕಣ್ತುಂಬಿಕೊಳ್ಳಲು ಅಪಾರ ಜನಸ್ತೋಮ ನೆರೆದಿತ್ತು. ಓಕುಳಿ ಕಾರ್ಯಕ್ರಮವನ್ನು ಗ್ರಾಮಸ್ಥರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ದುಂಡನಗೌಡ ಪಾಟೀಲ, ಮಹಾದೇವ ಡಂಗಿ, ಶ್ರೀಶೈಲ ನಾಯಿಕ, ಶಿವಾನಂದ ಖ್ಯಾಡಿ, ಅಣ್ಣಪ್ಪ ಕಾಂಬಳೆ, ಕರೆಪ್ಪ ಹಿರೇಕುರಬರ, ಮಾಳಪ್ಪ ಕಾಂಬಳೆ, ಕಲ್ಲಪ್ಪ ಪಾಟೀಲ, ಶ್ರೀಶೈಲ ಪೂಜಾರಿ, ಹನುಮಂತ ಹಟ್ಟಿ, ಕೆಂಚಪ್ಪ ಜಂಬಗಿ, ಸುರೇಶ ಕಾಂಬಳೆ, ಚಂದ್ರಪ್ಪ ಮಾದರ, ಕಾಸಪ್ಪ ಮಾದರ ಇತರರು ಇದ್ದರು.