ಸವದತ್ತಿ: ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಏಪ್ರಿಲ್ ಮೊದಲ ವಾರದಲ್ಲಿ ನೀರು ಪೂರೆಸಲು ಕ್ರಮ ಕೆಗೊಳ್ಳಲಾಗುತ್ತದೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಪಟ್ಟಣದ ಜಾಕ್ವೆಲ್ನಿಂದ ನಿರಂತರ ಕುಡಿಯುವ ನೀರು ಶುದಿಟಛೀಕರಣ ಟಕ ಗುರುವಾರ ವೀಸಿ ಮಾತನಾಡಿ, ಪಕ್ಕದಲ್ಲಿಯೇ ಮಲಪ್ರಭೆ ಇದ್ದರೂ ಪಟ್ಟಣದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಕುಡಿಯುವ ನೀರಿನ ಯೋಜನೆಯಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಮಾ.31ರಂದು ಪ್ರಾಯೋಗಿಕ ಪರೀೆ ನಡೆಸಲಾಗುವುದು. ಮನೆ ಮನೆಗಳಿಗೆ ಸಮರ್ಪಕವಾಗಿ ನಿರಂತರ ನೀರು ಪೂರೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ, ಹೆಸ್ಕಾಂ ಎಇಇ ಮಹೇಂದ್ರ ವಿಶಾಪೂರಕರ, ನಗರ ನೀರು ಸರಬರಾಜು ಎಇಇ ಅಶ್ವಿನಿ ಕಲಕುಟಕರ, ಶಿವಾನಂದ ಹೂಗಾರ, ಬಸವರಾಜ ಪ್ರಭುನವರ, ಮಂಜುನಾಥ ಪಾಚಂಗಿ, ಬಸವರಾಜ ಗುರಣ್ಣವರ ಇತರರಿದ್ದರು.