ಜಿಲ್ಲೆ

ಎಲ್ಲ ಕ್ಷೇತ್ರದಲ್ಲೂ ಮಹಿಳೆ ಮುಂಚೂಣಿ

ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಒಂದೇ ೇತ್ರಕ್ಕೆ ಮೀಸಲಿರದೆ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿ ಪ್ರತಿ ೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಪುರಸಭೆ ಅಧ್ಯೆ ವೀಣಾ ಜಗದೀಶ ಕವಟಗಿಮಠ ಹೇಳಿದರು.

ಇಲ್ಲಿನ ರವಳನಾಥ ಹೌಸಿಂಗ್​ ಸಹಕಾರಿ ಸಂಸ್ಥೆಯ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅರಿಶಿನ ಕುಂಕುಮ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಕೊಡುಗೆ ಸ್ಮರಿಸಲು ಈ ದಿನ ಮೀಸಲಿರಿಸಲಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಡಿಡಿಪಿಐ ಕಚೇರಿ ಡಿವೈಪಿಸಿ ರೇವತಿ ಮಠದ ಮಾತನಾಡಿ, ಪಾಲಕರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸತಿ, ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಸಹಕಾರಿಯ ಉಪಾಧ್ಯಕ್ಷೆ ಮೀನಾ ಬಸವರಾಜ ರಿಂಗಾನೆ ಹಾಗೂ ಸಂಸ್ಥಾಪಕ ಎಂ.ಎಲ್​.ಚೌಗಲೆ ಮಾತನಾಡಿದರು. ಶೋಭಾ ಯಳವತ್ತಿಮಠ, ಸುನೀತಾ ಮಾಳಿ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯೆ ಶಾಂಭವಿ ಅಶ್ವತ್ಥಪುರ, ಪ್ರಶಾಂತ ವರದಾಯಿ ಇದ್ದರು. ಚಿಕ್ಕೋಡಿ ಶಾಖೆಯ ಸಲಹೆಗಾರ ಜಯಶ್ರೀ ನಾಗರಳ್ಳಿ ಸ್ವಾಗತಿಸಿದರು. ಶ್ರುತಿ ಅರಬೋಲೆ ನಿರೂಪಿಸಿದರು. ಕವಿತಾ ಧರಿಗೌಡರ ವಂದಿಸಿದರು.