ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ುಲೆ ಜಯಂತ್ಯುತ್ಸವಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರೋಹಿಣಿ ಪಾಟೀಲ, ಡಾ.ಲತಾ ಮುಳ್ಳೂರ ಇತರರಿದ್ದರು. 
ಜಿಲ್ಲೆ

ಎಲ್ಲ ರಂಗಗಳಲ್ಲಿ ಮಹಿಳೆಯರ ಛಾಪು

ಚನ್ನಮ್ಮನ ಕಿತ್ತೂರು: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಅವರಿಗೆ ಎಲ್ಲ ಸ್ಥಾನಮಾನಗಳು ದಕ್ಕುತ್ತಿವೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ರಾಜಗುರು ಗುರುಭವನದಲ್ಲಿ ಸಾವಿತ್ರಿಬಾಯಿ ುಲೆ ರಾಷ್ಟ್ರೀಯ ಶಿಕ್ಷಕಿಯರ ೆಡರೇಷನ್, ಸಾವಿತ್ರಿಬಾಯಿ ುಲೆ ಶಿಕ್ಷಕಿಯರ ತಾಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾತೆ ಸಾವಿತ್ರಿಬಾಯಿ ುಲೆ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಮಾತನಾಡಿ, ಮಹಿಳೆಯರ ಹೋರಾಟ ಕೇವಲ ಸಮಾನತೆಗಾಗಿ. ಸಾವಿತ್ರಿಬಾಯಿ ುಲೆ ಸಂಘಟನೆ ಶಿಕ್ಷಕಿಯರಿಗೆ ಸಾಕಷ್ಟು ಸಹಾಯ ಮಾಡಿದೆ ಎಂದರು.

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ರಾಜಗುರು ಕಲ್ಮಠ ಕಿತ್ತೂರು ಸಾನ್ನಿಧ್ಯ ವಹಿಸಿದ್ದರು. ರೋಹಿಣಿ ಪಾಟೀಲ, ಮೀನಾಕ್ಷಿ ಭಾಂಗಿ, ಬಿಇಒ ಆರ್.ಪಿ. ಜುಟ್ಟನವರ, ಗಾಯತ್ರಿ ಅಜ್ಜನವರ, ಪ್ರಕಾಶ ಮೆಳವಂಕಿ, ಎಸ್.ಬಿ. ದಳವಾಯಿ, ಪುಷ್ಪಾ ಬನ್ನಿನಾಯ್ಕರ, ಮೀನಾಕ್ಷಿ ಸುತಗಟ್ಟಿ, ಪ್ರಜ್ಞಾ ಮತ್ತಿಹಳ್ಳಿ, ವೀಣಾ ಹಿರೇಮಠ, ವಿಜಯಲಕ್ಷ್ಮೀ ದೇಸಾಯಿ, ಉಜ್ವಲಾ ಪಾಟೀಲ ಇತರರಿದ್ದರು.