ಮುದಗಲ್: ಸಮೀಪದ ಆದಾಪುರ ಗ್ರಾಮದಲ್ಲಿ ಶ್ರೀ ಸದಾಶಿವ ಜಾತ್ರಾ ಮಹೋತ್ಸವ ಬುಧವಾರ ಸಂಜೆ ಶ್ರದ್ಧಾಭಕ್ತಿಯಿಂದ ರಥೋತ್ಸವ ಜರುಗಿತು.
ಬೆಳಗ್ಗೆ ಸದಾಶಿವ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ರಥಕ್ಕೆ ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಲಾಯಿತು.
ತೇರಿಗೆ ಸಂತೆಕೇಲೂರಿನ ಘನಮಠದ ಗುರುಬಸವ ಸ್ವಾಮೀಜಿ, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ಚಾಲನೆ ನೀಡಿದರು. ಭಕ್ತರ ಹರ್ಷೋದ್ಗಾರ, ಬಾಜಾ-ಭಜಂತ್ರಿ, ಡೊಳ್ಳು ಕುಣಿತದೊಂದಿಗೆ ಮಹಾ ರಥೋತ್ಸವ ನೆರವೇರಿಸಲಾಯಿತು. ಪ್ರಮುಖರಾದ ವಿಜಯಕುಮಾರ ಪಾಟೀಲ್, ಶಿವಕುಮಾರ ಪಾಟೀಲ್, ಸದಾಶಿವಪ್ಪ. ಸಂಗನಗೌಡ, ಸಿದ್ರಾಮೇಶ ಪಾಗದ, ಮಲ್ಲಣ್ಣ ಗೌಡರ ಇತರರಿದ್ದರು.