ಜಿಲ್ಲೆ

ಅಪಘಾತದಲ್ಲಿ ತಂದೆ ಸಾವು, ಮಗ ಗಂಭೀರ

ಚಿಂತಾಮಣಿ: ಇಲ್ಲಿನ ಬೆಂಗಳೂರು ರಸ್ತೆಯ ಗೊಂಗನಹಳ್ಳಿ ಸಮೀಪ ಭಾನುವಾರ ಸಂಜೆ ಕಾರು ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

ಕಸಬಾ ಹೋಬಳಿಯ ಹೀರೇಕಟ್ಟಿಗೇನಹಳ್ಳಿಯ ಲಕ್ಷ್ಮೀನರಸಿಂಹಪ್ಪ(45) ಮೃತ. ನಿತಿನ್(20) ಗಾಯಾಳು.

ಕಾರ್ಯನಿಮಿತ್ತ ದ್ವಿಚಕ್ರವಾಹನದಲ್ಲಿ ಕೈವಾರಕ್ಕೆ ತೆರಳಿದ್ದ ಲಕ್ಷ್ಮೀನರಸಿಂಹಪ್ಪ ಮತ್ತು ನಿತಿನ್ ಹೀರೇಕಟ್ಟಿಗೇನಹಳ್ಳಿಗೆ ವಾಪಸಾಗುವಾಗ ಚಿಂತಾಮಣಿ-ಬೆಂಗಳೂರು ಮಾರ್ಗವಾಗಿ ಹೊರಟಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಇನ್ನೊಂದು ಕಾರಿಗೆ ಡಿಕ್ಕಿಯಾಗಿದ್ದು, ಅವಘಡದಿಂದಾಗಿ ಅಪ್ಪ-ಮಗ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಕೈವಾರ ಹೊರಠಾಣೆ ಪೊಲೀಸರು ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೆ ಲಕ್ಷ್ಮೀನರಸಿಂಹಪ್ಪ ಕೊನೆಯುಸಿರೆಳೆದಿದ್ದಾರೆ. ಇನ್ನು ಪುತ್ರ ನಿತಿನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಹೊಸಕೋಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.