ಜಿಲ್ಲೆ

ಪ್ರತ್ಯೇಕ ಪ್ರಕರಣ ನಿಯಂತ್ರಣ ತಪ್ಪಿ ಎರಡು ಲಾರಿ ಪಲ್ಟಿ

Gadag - Desk - Tippanna Avadoot

ಯಲ್ಲಾಪುರ: ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಲಾರಿಗಳು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಇಡಗುಂದಿ ಬಳಿ ಶನಿವಾರ ನಡೆದಿದೆ.

ಇಡಗುಂದಿ ಸಮೀಪದ ಘರವಾಸ ಕ್ರಾಸ್ ಬಳಿಯಲ್ಲಿ ಗ್ಯಾಸ್ ಬುಲೆಟ್ ಟ್ಯಾಂಕರ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದು ಗಟಾರ ಆಚೆ ಇರುವ ಮರಕ್ಕೆ ಗುದ್ದಿದೆ. ಟ್ಯಾಂಕರ್ ಮುಂಭಾಗ ಜಖಂಗೊಂಡಿದೆ. ಚಾಲಕ, ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.

ಬಳಗಾರ ಕ್ರಾಸ್​ನಲ್ಲಿ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಗಟಾರಕ್ಕಿಳಿದು ಮುಂಭಾಗ ಜಖಂಗೊಂಡಿದೆ. ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಬಳಗಾರ ಕ್ರಾಸ್ ಬಳಿ ಶುಕ್ರವಾರವೂ ಒಂದು ಕಂಟೇನರ್ ಲಾರಿ ಪಲ್ಟಿಯಾಗಿತ್ತು.