ಗೊರೇಬಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹದಿಹರೆಯದವರ ಆರೊಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ಪತ್ತಿಪಾಟಿ ಸುಬ್ಬಲಕ್ಷ್ಮೀ, ಆರ್.ಕೆ.ಎಸ್.ಕೆ ಆಪ್ತಸಮಾಲೋಚಕ ರಾಮಾಂಜನ ಕುಮಾರ, ಎಎಎಂ ಕೇಂದ್ರದ ಸಿ.ಎಚ್.ಒ ಚಾಂದ್‌ಪಾಷಾ, ಪಿ.ಎಚ್.ಸಿ. ಅಂಬಮ್ಮ, ಆಶಾ ಕಾರ್ಯಕರ್ತರಾದ ಶಶಿಕಲಾ, ಶಂಕರಮ್ಮ, ನೀಲಮ್ಮ, ಎ.ಎಮ್.ಪದ್ಮಾವತಿ ಇತರರಿದ್ದರು. 
ಜಿಲ್ಲೆ

ಊಟದಲ್ಲಿ ಸಮತೊಲನ ಪದಾರ್ಥ ಸೇವೆ ಅಗತ್ಯ

ರುದ್ರಪ್ಪ ವಾಲಿ

ಗೊರೇಬಾಳ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು, ಆರ್.ಕೆ.ಎಸ್. ಕೆ ಸ್ನೇಹಾ ಕ್ಲಿನಿಕ್ ಅಡಿಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಆರ್.ಕೆ.ಎಸ್ಕೆ ಆಪ್ತ ಸಮಾಲೋಚಕ ಓಂಪ್ರಸಾದ ಅವರು ಹದಿಹರೆಯದ ಮಕ್ಕಳ ಆರೋಗ್ಯ ಹಾಗೂ ಹಲ್ಲಿನ ರಕ್ಷಣೆ ಕುರಿತು ವಿವರಣೆಯ ಮೂಲಕ ಮನವರಿಕೆ ಮಾಡಿದರು. ಎನ್.ಟಿ.ಇ.ಪಿ ಸಿಬ್ಬಂದಿ ಯಮನೂರಪ್ಪ ಕ್ಷಯರೊಗ ಹರಡುವಿಕೆಯ ಬಗ್ಗೆ ಮತ್ತು ಊಟದಲ್ಲಿ ಸಮತೊಲನ ಪದಾರ್ಥಗಳನ್ನು ಸೇವಿಸುವ ಕುರಿತು ತಿಳಿಸಿದರು.