ಶಿಕಾರಿಪುರ: ವನವಿದ್ದರೆ ಜನ, ಕಾಡಿದ್ದರೆ ನಾಡು. ಮನೆಗೊಂದು ಮರವಿರಬೇಕು. ಕೇರಿಗೊಂದು ವನ ಇರಬೇಕು ಎಂದು ಎಆರ್‌ಎ-ïಒ ಅಮಿತ್ ಹೇಳಿದರು.
ತಾಲೂಕು ನೊಳಂಬ ವೀರಶೈವ ಸಮಾಜ, ರೋಟರಿ ಕ್ಲಬ್ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಮಾತನಾಡಿ, ಕಾಡು ಬೆಳೆಸದ ನಮಗೆ ಖಂಡಿತವಾಗಿಯೂ ಕಾಡು ಕಡಿಯುವ ಹಕ್ಕಿಲ್ಲ. ಒಂದೆರಡು ದಶಕದಲ್ಲಿ ಮಲೆನಾಡು ಮಾನವನ ದೌರ್ಜನ್ಯದಿಂದ ಬಯಲು ನಾಡಾಗಲಿದೆ ಎಂದರು.
ನಾವೀಗ ಗಿಡ-ಮರಗಳನ್ನು ಪಾಲಿಸಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ. ಕಾಡು ಕಡಿಯುವ ಕೆಲಸ ಹೀಗೆಯೇ ನಿರಂತರ ಸಾಗುತ್ತಾ ಹೋದರೆ ನಾವು ವನ್ಯಜೀವಿಗಳನ್ನು ಕಾಗದದಲ್ಲಿ ಬರೆದು ತೋರಿಸಬೇಕಾಗುತ್ತದೆ. ನಮ್ಮ ದೌರ್ಜನ್ಯದ ಪರಿಣಾಮದಿಂದ ಕಾಲಕ್ಕೆ ಮಳೆಯಾಗದೆ ಬರ ಕಾಡುತ್ತದೆ. ಸಂಘ-ಸAಸ್ಥೆಗಳು ಹೀಗೆ ವನಮಹೋತ್ಸವದ ಮೂಲಕ ಗಿಡ ನೆಡುವ ಕಾರ್ಯಕ್ರಮ ಮಾಡಬೇಕು. ಈ ದಿಸೆಯಲ್ಲಿ ತಾಲೂಕು ನೊಳಂಬ ವೀರಶೈವ ಸಮಾಜದ ಸಮಾಜಮುಖಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ತಾಲೂಕು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಎಸ್.ಪಾಟೀಲ್ ಮಾತನಾಡಿ, ಸಮಾಜದ ಬಂಧುಗಳು ತಾವಿರುವ ಜಾಗದಲ್ಲಿ -Àಲ ಕೊಡುವ ಗಿಡಗಳನ್ನು ಹಚ್ಚಬೇಕು. ಮರಗಳನ್ನೇ ತಮ್ಮ ಮಕ್ಕಳೆಂದು ಸಾಕಿ, ಸಲುಹಿದ ಸಾಲುಮರದ ತಿಮ್ಮಕ್ಕ ನಮಗೆಲ್ಲ ಮಾದರಿಯಾಗಬೇಕು. ಸಮಾಜ ಇಂತಹ ಸಮಾಜಮುಖಿ ಕಾರ್ಯಗಳನ್ನು ವರ್ಷವಿಡೀ ಮಾಡಬೇಕೆಂದು ಯೋಜನೆ ಮಾಡಿಕೊಂಡಿದೆ. ಸಾಮಾಜಿಕ ಚಿಂತನೆಗಳ ಕಡೆಗೆ ನಾವು ಹೆಚ್ಚಿನ ಗಮನಹರಿಸಬೇಕು. ಅರಣ್ಯ ಇಲಾಖೆಯವರ ಸಹಕಾರಕ್ಕೆ ನಾವು ಋಣಿ ಎಂದರು.
ರೋಟರಿ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ಪುರಸಭೆ ಸದಸ್ಯ ದರ್ಶನ್ ಉಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುರಾಜ್ ಜಕ್ಕಿನಕೊಪ್ಪ, ಸಿ.ಪಿ. ಹೆಗ್ಗಡೆ, ಮೌನೇಶಪ್ಪ, ಎಸ್.ಇ.ಜಯ್ಯಪ್ಪ, ಬೇಕರಿ ರಘುನಾಥ್, ಸಿದ್ದು, ಮಲ್ಲಿಕಾರ್ಜುನ, ಹನುಮಗೌಡ, ಯೋಗೀಶ್ ಇತರರಿದ್ದರು.