ಸವದತ್ತಿ: ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ 10 ಎಕರೆ ಜಾಗ ಗುರುತಿಸಲಾಗಿದ್ದು, 30 ಕೋಟಿ ರೂ. ವೆಚ್ಚದಲ್ಲಿ 2 ವರ್ಷದಲ್ಲಿ ಸುಸಜ್ಜಿತ ವಸತಿ ಶಾಲಾ ಕಟ್ಟಡ, ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಅಕ್ಸಾ ಮಸೀದಿ ಆವರಣದಲ್ಲಿ ವಕ್ಫ್ ಬೋರ್ಡ್ ಅನುದಾನದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ 10 ಮುರಾರ್ಜಿ ಅಲ್ಪಸಂಖ್ಯಾತರ ವಸತಿ ಶಾಲೆಗಳು ಮಂಜೂರಾಗಿದ್ದು, ಈ ಪೈಕಿ ನಮ್ಮ ಕ್ಷೇತ್ರಕ್ಕೂ ಒಂದು ದೊರೆತಿದೆ. ಅಲ್ಪ ಸಂಖ್ಯಾತರ ಅನುದಾನವು ನಮ್ಮ ತಾಲೂಕಿಗೆ ಸಿಂಹಪಾಲು ದೊರೆತಿದೆ. ಪಟ್ಟಣದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ಅನುದಾನದಲ್ಲಿ ಖಬರ್‌ಸ್ಥಾನ ಅಭಿವೃದ್ಧಿಪಡಿಸುವ ಜವಾಬ್ದಾರಿಯಿದೆ. ಮಸೀದಿ, ಶಾದಿ ಮಹಲ್‌ಗಳಿಗೆ ಈಗಾಗಲೇ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಕ್ರಮಬದ್ಧ ದಾಖಲೆ ಪೂರೈಸಿದರೆ ಅನುದಾನ ನೇರವಾಗಿ ಖಾತೆಗೆ ಜಮೆಯಾಗಲಿದೆ. ಸಮುದಾಯದ ಯಾವುದೇ ಕೆಲಸಗಳಿದ್ದರೆ ಸಹಾಯ ಮಾಡುವುದಾಗಿ ತಿಳಿಸಿದರು.
ಮುಖಂಡ ಅಬ್ದುಲ್ ಲತ್ೀ ಸವದತ್ತಿ ಮಾತನಾಡಿ, ಮಸೀದಿ ಅಭಿವೃದ್ಧಿಗಾಗಿ 45 ಲಕ್ಷ ರೂ. ಅನುದಾನ ನೀಡುವ ಮೂಲಕ ಶಾಸಕರು ಕೊಟ್ಟ ಭರವಸೆ ಈಡೇರಿಸಿದ್ದಾರೆ ಎಂದರು.
ಮುಖಂಡರಾದ ಎಸ್.ಆರ್. ಪಾಟೀಲ್, ಬಿ.ಎಂ. ಯಲಿಗಾರ, ರೆಹಮಾನ್ ಸಂಗ್ರೆಶಕೊಪ್ಪ, ಸಲೀಂ ಬಿಜಲಿಖಾನ್, ಬಾಬುಸಾಬ ನಾಶಿಪುಡಿ, ಇಮಾಮಹುಸೇನ್ ದೇದಾರ್, ಜೈನು ಮಾಂಜರಿ, ಹುಸೇನಸಾಬ್ ಗೊರವನಕೊಳ್ಳ, ಆರ್ೀ ದೊಡವಾಡ, ಸಲಾಂ ಬೆಟಗೇರಿ, ಮಲೀಕ್ ಮುಮ್ಮಿಗಟ್ಟಿ, ಅಸ್ೀ ಯಡ್ರಾವಿ, ರಾಜು ಯರಗಟ್ಟಿ ಇತರರು ಇದ್ದರು.