ಕುಂಬಳೆ: ಕಳೆದ ವರ್ಷ ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸಾವುಗಳು ಕೇರಳದಲ್ಲಿ ವರದಿಯಾಗಿವೆ. 2024ರ ಜನವರಿಯಿಂದ ಡಿ.6 ರವರೆಗಿನ ಅಂಕಿ-ಅಂಶಗಳ ಪ್ರಕಾರ ಕೇರಳದಲ್ಲಿ ಕೋವಿಡ್‌ನಿಂದ 66 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿಯಲ್ಲಿ ಕರ್ನಾಟಕ ಅತಿ ಹೆಚ್ಚು ಕರೋನಾ ಪ್ರಕರಣ ವರದಿ ಮಾಡಿದ ರಾಜ್ಯವಾಗಿದೆ ಎಂದು ಹೇಳಲಾಗಿದೆ.
5 ವಷರ್ಗಳ ಹಿಂದೆ ಭಾರತದಲ್ಲಿ ಮೊದಲು ವರದಿಯಾದ ಕೊರೊನಾ ವೈರಸ್ ಹರಡುವಿಕೆ ಈಗ ತೀವ್ರವಾಗಿ ಕಡಿಮೆಯಾಗಿದ್ದರೂ, ವೈರಸ್ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದು ಡೇಟಾ ಸೂಚಿಸುತ್ತದೆ. 2024ರಲ್ಲಿ ಕೇರಳ ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಸಾವನ್ನು (66) ಹೊಂದಿತ್ತು. 5,597 ಜನರಿಗೆ ಈ ವೈರಸ್ ಸೋಂಕು ತಗುಲಿದೆ. 2023ರಲ್ಲಿ 516 ಸಾವುಗಳು ವರದಿಯಾಗಿವೆ.
2024ರಲ್ಲಿ ಕೋವಿಡ್ ಸಾವಿನ ಸಂಖ್ಯೆ ಕೇರಳದಲ್ಲಿ ಹೆಚ್ಚಿದ್ದರೂ, ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ 7,252 ಕೋವಿಡ್ ಪ್ರಕರಣ ವರದಿಯಾಗಿವೆ. ಕಳೆದ ವರ್ಷ ಅಲ್ಲಿ 39 ಕೋವಿಡ್ ಸಾವುಗಳು ದಾಖಲಾಗಿದ್ದವು.
ಜನವರಿ 2021ರಿಂದ ಡಿಸೆಂಬರ್ 2, 2024ರ ನಡುವೆ ಕೇರಳದಲ್ಲಿ 69,095 ಕೋವಿಡ್ ಸಾವುಗಳು ವರದಿಯಾಗಿವೆ ಎಂದು ಅಂದಾಜಿಸಲಾಗಿದೆ. ಕೇರಳ ಎರಡನೇ ಅತಿ ಹೆಚ್ಚು ಸಾವಿನ ಸಂಖ್ಯೆ ಹೊಂದಿದೆ. ಮಹಾರಾಷಟ್ರೆ ಮುಂದಿದೆ. ಇಲ್ಲಿ 99,139 ಸಾವುಗಳು ದಾಖಲಾಗಿವೆ.
ಪ್ರಸ್ತುತ ಸೀಮಿತ ರೋಗ ನಿರ್ಣಯ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್‌ಗೆ ಜನರ ರೋಗ ನಿರೋಧಕ ಶಕ್ತಿ ಸುಧಾರಿಸಿದೆ. ಕೊರೊನಾ ವೈರಸ್ ಆರೋಗ್ಯವಂತ ವ್ಯಕ್ತಿಯಲ್ಲಿ ಗಮನಾರ್ಹ ಸಮಸ್ಯೆ ಉಂಟುಮಾಡುವುದಿಲ್ಲ ಎಂದು ಅಧ್ಯಯನ ತೋರಿಸುತ್ತವೆ.