ಇಂಡಿ ಪಟ್ಟಣದ ಕೆಇಬಿ ಎಲ್.ಟಿ.ಯಲ್ಲಿ ದುರ್ಗಾದೇವಿ, ಸಂತ ಸೇವಾಲಾಲ್ ಜಾತ್ರಾ ಮಹೋತ್ಸವದಲ್ಲಿ ರಕ್ತದಾನ ಶಿಬಿರಕ್ಕೆ ಪಿಂಟು ರಾಠೋಡ ಚಾಲನೆ ನೀಡಿದರು. ಬಿ.ಎಚ್.ಇ.ಒ. ವೈ.ಎಂ. ಪೂಜಾರಿ, ಡಾ. ಪ್ರಶಾಂತ ದೂಮಗೊಂಡ, ಡಾ. ಮಮದಾಪುರ ಇತರರಿದ್ದರು. 
ಜಿಲ್ಲೆ

ರಕ್ತದಾನದಿಂದ ಆರೋಗ್ಯ ವೃದ್ಧಿ : 55 ಜನರಿಂದ ದಾನ

ಇಂಡಿ : ರಕ್ತ ಕತಕವಾಗಿ ಸಷ್ಟಿಸಲು ಸಾಧ್ಯವಿಲ್ಲ. ಅದನ್ನು ಮನುಷ್ಯರಿಂದಲೇ ಪಡೆಯಬೇಕು. ಅದಕ್ಕೆ ಜನರು ಹೆಚ್ಚು- ಹೆಚ್ಚು ರಕ್ತದಾನ ಮಾಡಲು ಮುಂದೆ ಬರುವುದರ ಜೊತೆಗೆ ಜನರಲ್ಲಿ ಜಾಗತಿ ಮೂಡಿಸಬೇಕು ಎಂದು ಪುರಸಭೆ ಸದಸ್ಯ ಪಿಂಟು ರಾಠೋಡ ಹೇಳಿದರು.

ಭಾನುವಾರ ಪಟ್ಟಣದ ಕೆಇಬಿ ಎಲ್.ಟಿ.ಯಲ್ಲಿ ದುರ್ಗಾದೇವಿ, ಸಂತ ಸೇವಾಲಾಲ್ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರಕ್ತದ ಕೊರತೆ ಹೋಗಲಾಡಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಈಗಾಗಲೇ ಹಲವು ಸಮುದಾಯದ ಮುಖಂಡರು ರಕ್ತದಾನ ಶಿಬಿರ ನಡೆಸಲು ಸಮ್ಮತಿಸಿದ್ದಾರೆ. ಆಯಾ ಸಮುದಾಯಗಳು ರಕ್ತದಾನ ಮಾಡಲು ಯುವಕರನ್ನು ಪ್ರೇರೇಪಿಸುವುದರಿಂದ ರಕ್ತದ ಕೊರತೆ ನಿವಾರಿಸಬಹುದು ಎಂದರು.

ಬಿ.ಎಚ್.ಇ.ಒ. ವೈ.ಎಂ. ಪೂಜಾರಿ ಮಾತನಾಡಿ, ರಕ್ತವೆಂಬ ವಸ್ತುವೇ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ, ಆರೋಗ್ಯವಂತ ಯುವಕರ ರಕ್ತವು ಬಹಳಷ್ಟು ಜನರಿಗೆ ಉಪಕಾರಿಯಾಗಲಿದೆ ಎಂದರು.

ಬೆಳಗ್ಗೆ 11 ಗಂಟೆಗೆ ಆರಂಭವಾದ ಶಿಬಿರ ಸಂಜೆಯವರೆಗೂ ನಡೆಯಿತು. ಶಿಬಿರದಲ್ಲಿ ಸುಮಾರು 55 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಡಾ. ಪ್ರಶಾಂತ ದೂಮಗೊಂಡ, ಡಾ. ಮಮದಾಪುರ, ಎಸ್.ಎಚ್.ಐ.ಒ. ಗೀತಾ ಎಸ್. ಪತ್ತಾರ, ಬಸವರಾಜ ಪಾಟೀಲ, ಅಶೋಕ ಬಿರಾದಾರ ಸೇರಿದಂತೆ ಅನೇಕ ಆಶಾ ಕಾರ್ಯಕರ್ತೆಯರು ಇದ್ದರು.