ಕಾರ್ಯಕ್ರಮದಲ್ಲಿ ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳನ್ನು ಅಭಿನಂದಿಸಲಾಯಿತು. ಎಸ್.ನಾಗರಾಜು, ಡಿ.ದ್ಯಾವಣ್ಣ, ಬಸವರಾಜಪ್ಪ, ಶಿವಕುಮಾರ್, ಚೆನ್ನಪ್ಪ, ರುದ್ರಸ್ವಾಮಿ, ಬಸವರಾಜಣ್ಣ, ಎಂ. ಜಗದೀಶ್, ಮಧುಸೂದನ್ ಇದ್ದರು. 
ಜಿಲ್ಲೆ

ವಚನಗಳ ಬೋಧನೆಯಿಂದ ಸುಧಾರಣೆ

ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಕದಂಬ ಜಂಗಮಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಬಸವ ಜ್ಯೋತಿ ಕಾರ್ಯಕ್ರಮದ 147ನೇ ಆಧ್ಯಾತ್ಮಿಕ ಕಾರ್ಯಕ್ರಮ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ಜರುಗಿತು.

ಮಂಡ್ಯ ನಗರದ ವಿ.ವಿ. ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಎಸ್.ನಾಗರಾಜು ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಮೌಲ್ಯಯುತ ವಚನಗಳನ್ನು ಪ್ರತಿಯೊಬ್ಬರೂ ಮನೆಗಳಲ್ಲಿ ಮಕ್ಕಳಿಗೆ ಹಾಗೂ ಕುಟುಂಬದ ಸದಸ್ಯರೆಲ್ಲರಿಗೂ ಬೋಧಿಸುವುದರಿಂದ ಒಳ್ಳೆಯ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.

ವಚನಗಳು ಪ್ರಾಣ ಇದ್ದಂತೆ. ಅವುಗಳೆಲ್ಲವನ್ನು ಸಂರಕ್ಷಿಸುವ ಹೊಣೆ ನಮ್ಮದಾಗಿದೆ. ಬಸವಣ್ಣನವರು ಶಿಕ್ಷಣಕ್ಕೆ ಮೌಲ್ಯಯುತ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಪ್ರಸ್ತುತ ಇಡೀ ಪ್ರಪಂಚಕ್ಕೆ ಬಸವಣ್ಣನ ಆದರ್ಶ ಅಗತ್ಯವಾಗಿದೆ ಎಂದರು. ಯಾರು ಬಸವ ಧರ್ಮದಲ್ಲಿ ನಡೆದುಕೊಳ್ಳುತ್ತಾರೋ ಅವರೆಲ್ಲರನ್ನು ಈ ಧರ್ಮವು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆ ಎಂದು ತಿಳಿದರು.

ವೈದ್ಯನಾಥಪುರದ ಕದಂಬ ಜಂಗಮ ಮಠದ ಪೀಠಾಧ್ಯಕ್ಷ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿಯನ್ನು ಗೌರವಸಿಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ವೇದಿಕೆಯಲ್ಲಿ ಬಸವೇಶ್ವರ ಪತ್ತಿನ ಸಂಘದ ಉಪಾಧ್ಯಕ್ಷ ಡಿ. ದ್ಯಾವಣ್ಣ ಹಾಗೂ ಬಸವರಾಜಪ್ಪ, ಶಿವಕುಮಾರ್, ಚೆನ್ನಪ್ಪ, ರುದ್ರಸ್ವಾಮಿ, ಬಸವರಾಜಣ್ಣ, ಎಂ.ಜಗದೀಶ್, ಮಧುಸೂದನ್ ಇದ್ದರು.