ಹೊಳಲ್ಕೆರೆ: ಅರಣ್ಯ ಜಮೀನು ಒತ್ತುವರಿ ತಡೆಯಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರಾಣ ಬೆದರಿಕೆ ಹಾಕಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಜನವರಿ 9, 2021ರಂದು ತಾಲೂಕಿನ ಚಿಕ್ಕಂದವಾಡಿ ಗ್ರಾಮದ ಸಮೀಪ ಸಾದರಹಳ್ಳಿ ಗ್ರಾಮದ ರಿ.ಸ.ನಂ.68ರಲ್ಲಿ ಅರಣ್ಯ ಜಾಗವನ್ನು ಚಂದ್ರಪ್ಪ ಒತ್ತುವರಿ ಮಾಡುತ್ತಿದ್ದನ್ನು ಅರಣ್ಯಾಧಿಕಾರಿಗಳು ತಡೆಯಲು ಯತ್ನಿಸಿದ ಸಂದರ್ಭ ಹಲ್ಲೆ ನಡೆಸಲಾಗಿದ್ದುಕ, ಈ ಕುರಿತು ಚಿಕ್ಕಜಾಜೂರು ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಪಿ.ಉಮೇಶ್, ಚಂದ್ರಪ್ಪನಿಗೆ ಕಲಂ 353ರಡಿ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, 332ರಡಿ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಮಂಜುಳಾ ವಾದ ಮಂಡಿಸಿದ್ದರು.