ಜಿಲ್ಲೆ

ಶ್ರೀಗಂಧದ ಕಳ್ಳರಿಗೆ ಶಿಕ್ಷೆ

Uttara Kannada - Subash Hegde

ಶಿರಸಿ: ಶ್ರೀಗಂಧದ 6 ತುಂಡುಗಳನ್ನು ಕಾರಿನಲ್ಲಿ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಇಬ್ಬರು ಅಪರಾಧಿಗಳಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು 5 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮಹೇಶ ರಾಮಚಂದ್ರ ಗುಡಿಗಾರ ಹಾಗೂ ಗಣೇಶ ರಾಮಚಂದ್ರ ಗುಡಿಗಾರ ಶಿಕ್ಷೆಗೊಳಗಾದವರು.

2020 ರ ಸೆಪ್ಟೆಂಬರ್ ತಿಂಗಳಲ್ಲಿ ಫೀರ್‌ಖಾನ್ ಜಾಫರ್ ಖಾನ್ ಎಂಬಾತನಿಂದ ಗಂಧದ ತುಂಡುಗಳನ್ನು ಖರೀದಿಸಿ ಸಾಗಿಸುತ್ತಿದ್ದ ವೇಳೆ ಬನವಾಸಿ ಠಾಣೆಯ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದು, ಬಂಧಿತರಾಗಿದ್ದರು.

ಪಿಎಸ್‌ಐ ಬಾಲಕೃಷ್ಣ ಪಾಲೇಕರ್ ಇವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಶಿರಸಿ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ಪೀಠಾಸೀನ ಅಧಿಕಾರಿ ಕಿರಣ ಕಿಣಿ ಅವರು ಕರ್ನಾಟಕ ಅರಣ್ಯ ಕಾಯ್ದೆಯಂತೆ ತೀರ್ಪು ಪ್ರಕಟಿಸಿದ್ದಾರೆ