ಸರಗೂರು: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಹೇಳಿದರು.
ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಸಿ ತಳಲು ಪ್ರೌಢಶಾಲೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸರಗೂರು ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಸಂಪಾದಿಸಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಕೃಷ್ಣಭೋವಿ ಮಾತನಾಡಿ, ದೈಹಿಕ ಶಿಕ್ಷಣಕ್ಕೆ ಪಠ್ಯದಷ್ಟೇ ಮಹತ್ವವಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಮುಖ್ಯ. ಸೋಲು-ಗೆಲುವು ಸಾಮಾನ್ಯವಾಗಿದ್ದು ಸ್ಪರ್ಧಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದರು.
ಸಮಾಜ ಸೇವಕ ಕೃಷ್ಣ ಭೋವಿ 150 ಮಕ್ಕಳಿಗೆ ಸಮವಸ್ತ್ರ ಹಾಗೂ ದೈಹಿಕ ಶಿಕ್ಷಕರಿಗೆ ಕೇಫ್‌ಗಳನ್ನು ಕೊಡುಗೆ ನೀಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾದಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಿಜಗುಣ, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಪ್ರಾಂಶುಪಾಲ ಕಾಮಿಸ್ವಾಮಿ, ಇಂಡಿಯನ್ ಗ್ಯಾಸ್ ವ್ಯವಸ್ಥಾಪಕ ಸುಪ್ರೀತ್, ಗ್ರಾಪಂ ಸದಸ್ಯ ಪ್ರಕಾಶ್ ಚಂದ್ರ, ವೆಂಕಟರಾಮು, ರಾಜಕುಮಾರ್, ಕೆಂಡನಾಯಕ, ಗ್ರಾಪಂ ಮಾಜಿ ಸದಸ್ಯ ಬಸವಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಗುರುಸ್ವಾಮಿ, ನಿಖಿಲೇಶ್, ಅಶ್ರಾಫ್ ಆಲಿ, ಭವನೇಶ್, ಮಹದೇವಪ್ಪ, ಗೋವಿಂದ ಭೋವಿ, ನಂದೀಶ್, ಶಿವಕುಮಾರ್, ರಾಜು, ಎಂಸಿ ತಳಲು ಪ್ರೌಢಶಾಲೆ ಪ್ರಾಂಶುಪಾಲ ರಾಜು ಎಂ ಬಂಡಳ್ಳಿ, ಶಿಕ್ಷಕಿ ಶಾರದಾ, ಶೃತಿ, ಗುರುಸ್ವಾಮಿ, ಮದನ್, ಕೃಷ್ಣಮೂರ್ತಿ, ಅಶೋಕ್, ಎಂ.ಎಸ್.ಮಹಾದೇವ, ನಾರಾಯಣಸ್ವಾಮಿ, ಭೀಮಪ್ಪ, ವಸಂತಕುಮಾರ್, ಯಶ್ವಂತ್, ಬೋಗನಂಜಯ್ಯ, ಜಯರಾಮ್, ಪ್ರಮೋದ್, ಸಣ್ಣಸೋಮಯ್ಯ, ಮಹೇಶ್, ಪ್ರಸನ್ನ, ನಾಗರಾಜು, ಜ್ಯೋತಿ, ಚಂದ್ರ ಶೇಖರ್, ಲೋಕೇಶ್ ಹಾಜರಿದ್ದರು.