ಜಿಲ್ಲೆ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಮಹತ್ವದ ಪಾತ್ರ

ಇಂದಿರಾ ಎನ್ ಕೆ

ಕಾರ್ಕಳ: ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲ ಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್‌ಸಿಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿ ಎನ್‌ಸಿಸಿ ನೇವಲ್ ವಿಭಾಗದ ಕವಾಂಡರ್ ಅಶ್ವಿನ್ ಎಂ.ರಾವ್ ಹೇಳಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್‌ಸಿಸಿ ನೇವಲ್ ಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್‌ಸಿಸಿ ಕ್ಷೇಮಪಾಲನಾಧಿಕಾರಿಗೆ ಎನ್‌ಸಿಸಿ ಧ್ವಜ ಹಸ್ತಾಂತರಿಸಿ ವಾತನಾಡಿದರು.

ಎನ್‌ಸಿಸಿ ಧ್ವಜದ ಮಹತ್ವ, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ವಾಹಿತಿ ನೀಡಿದರು.

ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ವಾತನಾಡಿ, ಸಂಸ್ಥೆಯಲ್ಲಿ ಓದಿದ ಎನ್‌ಸಿಸಿ ಟಕದ ವಿದ್ಯಾರ್ಥಿಯು ಎನ್‌ಸಿಸಿ ಕೋಟಾದಡಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂಬಿಬಿಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆ ವತಿಯಿಂದ ಭಾರತೀಯ ಸೇನೆಗೆ 10 ಸಾವಿರ ರೂ. ಕೊಡುಗೆಯಾಗಿ ನೀಡಲಾಗುವುದು ಎಂದು ೋಷಿಸಿದರು.

ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ.ಕೊಡವೂರ್, ಎನ್‌ಸಿಸಿಯ ಪಿಐ ಅಧಿಕಾರಿ ಅಮಿತ್ ರಾವತ್, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್, ಸಂಸ್ಥೆ ಪಿಆರ್‌ಒ ಜ್ಯೋತಿ ಪದ್ಮನಾಭ್ ಭಂಡಿ, ಲೆಫ್ಟಿನೆಂಟ್ ಮಂಜುನಾಥ್ ಮುದೂರ್ ಉಪಸ್ಥಿತರಿದ್ದರು.

ಎನ್‌ಸಿಸಿ ಕ್ಷೇಮಪಾಲನಾಧಿಕಾರಿ ಕೃಷ್ಣಪ್ರಸಾದ್ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿ, ವಂದಿಸಿದರು.