ವಿಜಯಪುರ: ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಾ (ಜಾತಿ ಗಣತಿ) ವರದಿ ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾ ಅಹಿಂದ ಮುಖಂಡರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಿದ ಸಮೀಾ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುವ ಅಗತ್ಯವಿಲ್ಲ. ಸುಮಾರು 159 ಕೋಟಿ ರೂ. ಗಳ ಖರ್ಚು ಮಾಡಿ ತಯಾರಿಸಿದ ವರದಿಯು ಕೂಡಲೇ ಜಾರಿಗೊಳಿಬೇಕು. ಹಿಂದಿನಿಂದಲೂ ಸಾಮಾಜಿಕ ನ್ಯಾಯದ ಪರವಾದ ಕರ್ನಾಟಕ ಸದ್ಯ ಜಾತಿ ಗಣತಿ ಅಥವಾ ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಾ ವರದಿ ತಯಾರಿಸಿರುವುದು ಇಡೀ ದೇಶಕ್ಕೇ ಮಾದರಿಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಜಾತಿ ಗಣತಿಯ ವರದಿ ಜಾರಿಗೆ ಬಂದರೆ ಜಾತಿಗಳ ವಸ್ತು ಸ್ಥಿತಿ ತಿಳಿಯಲಿದ್ದು, ಸರ್ಕಾರಗಳು ಅದಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಬಹುದು. ರಾಜ್ಯದ 7 ಕೋಟಿ ಜನಸಂಖ್ಯೆಯ ಅಧ್ಯಯನವಾಗಿರುವುದರಿಂದ ಜಾತಿ ಗಣಿತಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ವರದಿಯು ಸಂಗ್ರಹಿಸಿದ ವಿಧಾನವನ್ನು ತರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು. ಸದ್ಯ ಕೊಟ್ಟ ಮಾತಿನಂತೆ ನಡೆದು ವರದಿ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಖಂಡರಾದ ಎಸ್.ಎಂ. ಪಾಟೀಲ (ಗಣಿಯಾರ), ಸೋಮನಾಥ ಕಳ್ಳಿಮನಿ, ಸಂಜು ಕಂಬಾಗಿ, ಅಕ್ರಮ ಮಾಶ್ಯಾಳಕರ, ಕಾಮೇಶ ಉಕ್ಕಲಿ, ಮಲ್ಲು ಬಿದರಿ, ದಾದಾಪೀರ ಬಡಕಲ್, ಭೀಮನಗೌಡ ಹಳಿಮನಿ, ನಿರ್ಮಲಾ ಹೊಸಮನಿ, ಸಚಿತಾ ವಗ್ಗರ, ಭೀಮು ಉತ್ನಾಳ, ಮಲ್ಲು ಕಾಮನಕೇರಿ, ಭೀರಪ್ಪ ಜುಮನಾಳ ಮತ್ತಿತರರಿದ್ದರು.