ಸದಲಗಾ ಪಟ್ಟಣದಲ್ಲಿ ಅಂಗಡಿ, ಮಳಿಗೆಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕರವೇ ವತಿಯಿಂದ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸಂಜು ಲಠ್ಠೆ, ವೈಭವ ಪಾಟೀಲ, ಅಭಿಷೇಕ ನಾಂದ್ರೆ, ಅಮಿತ ಹಣಬರ ಇತರರಿದ್ದರು. 
ಜಿಲ್ಲೆ

ಕಡ್ಡಾಯವಾಗಿ ಕನ್ನಡ ಬಳಸಲಿ

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಅಂಗಡಿ, ಮಳಿಗೆಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಸರ್ಕಾರದ ನಿಯಮ ಸಮರ್ಥವಾಗಿ ಅನುಷ್ಠಾನಗೊಳಿಸುವಂತೆ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಎಲ್ಲ ಅಂಗಡಿ, ಮಳಿಗೆಗಳ ನಾಮಲಕಗಳಲ್ಲಿ ಶೇ. 60 ಕನ್ನಡ ಬಳಕೆ ಆಗಲೇಬೇಕು. ಸ್ಪಂದಿಸಿದವರಿಗೆ ಪುರಸಭೆ ಅಧಿಕಾರಿಗಳು ಅಂಗಡಿ, ಮುಂಗಟ್ಟುಗಳಿಗೆ ನೋಟಿಸ್ ನೀಡಿ ಸರ್ಕಾರದ ನಿಯಮ ಪಾಲಿಸಬೇಕು. ಕನ್ನಡ ಲಕ ಅಳವಡಿಕೆಗೆ ಷರತ್ತು ವಿಧಿಸಿ ಮಳಿಗೆ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಸದಲಗಾ ಕರವೇ ಅಧ್ಯಕ್ಷ ಸಂಜು ಲಠ್ಠೆ, ಉಪಾಧ್ಯಕ್ಷ ವೈಭವ ಪಾಟೀಲ, ಅಭಿಷೇಕ ನಾಂದ್ರೆ, ಅಮಿತ ಹಣಬರ, ವಿಕಾಸ ನಿಡಗುಂದೆ, ಪ್ರತೀಕ ಗಿಡಗಲ್ಲೆ, ರೋಹನ ನವನಾಲೆ, ರಾಜು ವಾಲಿ, ಮಹೇಶ ಕೊಲ್ಲಾಪುರೆ, ನಿತಿನ ದೇಸಾಯಿ, ಮಲ್ಲಪ್ಪ ವಿಭುತ್ತೆ, ನದೀಂ ಲಾಟಕರ, ಇತರರಿದ್ದರು.