ಇಂಪಲ್ಸಿಸ್ ಕಂಪನಿಯು ಮಂಗಳೂರು ಬೆಂದೂರ್‌ವೆಲ್ ಬಲ್ಮಠ ರಸ್ತೆಯ ಸ್ಪೆಕ್ಟ್ರಮ್ ಟವರ್‌ನಲ್ಲಿ ಪ್ರಾರಂಭಿಸಿದ ಸುಧಾರಿತ ವೈದ್ಯಕೀಯ ಸಾಧನಗಳ ಪರೀಕ್ಷಾ ಪ್ರಯೋಗಾಲಯವನ್ನು ಲ್ಯಾರ್ ಡಲ್ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಶೆಟ್ಟಿ ಉದ್ಘಾಟಿಸಿದರು. ಕ್ಯುಏ ಮುಖ್ಯಸ್ಥ ಮತ್ತು ನಿರ್ದೇಶಕ ವಿನ್ಸೆಂಟ್ ಎಮರಾಲ್ಡ್ ಉಪಸ್ಥಿತರಿದ್ದರು. 
ಜಿಲ್ಲೆ

ಮಂಗಳೂರಿನಲ್ಲಿ ಇಂಪಲ್ಸಿಸ್ ಸುಧಾರಿತ ವೈದ್ಯಕೀಯ ಪ್ರಯೋಗಾಲಯ ಪ್ರಾರಂಭ

Mangaluru - Prakash MC Manjeshwar

ಮಂಗಳೂರು: ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಯಾದ ಇಂಪಲ್ಸಿಸ್ ಸುಧಾರಿತ ವೈದ್ಯಕೀಯ ಸಾಧನಗಳ ಪರೀಕ್ಷಾ ಪ್ರಯೋಗಾಲಯವನ್ನು ನಗರದ ಬೆಂದೂರ್‌ವೆಲ್ ಬಲ್ಮಠ ರಸ್ತೆಯ ಸ್ಪೆಕ್ಟ್ರಮ್ ಟವರ್‌ನಲ್ಲಿ ಪ್ರಾರಂಭಿಸಿದೆ.
 ಈ ಪರೀಕ್ಷಾ ಸೌಲಭ್ಯವು ಆರೋಗ್ಯ ಉದ್ಯಮಕ್ಕೆ ಇಂಪೆಲ್ಸಿಸ್ ಒದಗಿಸುವ ಉತ್ತಮ ಗುಣಮಟ್ಟದ - ಡೇಟಾ ಅನಾಲಿಟಿಕ್ಸ್, ಕೌಡ್, ಏ ಐ -ಚಾಲಿತ ಪ್ಲಾಟ್‌ಫಾರ್ಮ್ ಮತ್ತು ಕಲಿಕೆಯ ಸೇವೆಗಳ ವ್ಯಾಪಕ ಶ್ರೇಣಿಗೆ ಮತ್ತೊಂದು ಸೇರ್ಪಡೆಯಾಗಿದೆ.
ಈ ಸೌಲಭ್ಯವನ್ನು ಲ್ಯಾರ್ ಡಲ್ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಶೆಟ್ಟಿ ಉದ್ಘಾಟಿಸಿದರು. ಇಂಪೆಲ್ವಿಸ್‌ನ ಕ್ಯುಏ ಮುಖ್ಯಸ್ಥ ಮತ್ತು ನಿರ್ದೇಶಕ ವಿನ್ಸೆಂಟ್ ಎಮರಾಲ್ಡ್ ಅವರು ಮಾತನಾಡಿ, ಈ ಸೌಲಭ್ಯ ಆರೋಗ್ಯ ರಕ್ಷಣೆಯಲ್ಲಿ ಪರಿವರ್ತನೆಯನ್ನು ವೇಗಗೊಳಿಸುವುದು. ಇದು ಆಸ್ಪತ್ರೆ ಮತ್ತು ಕ್ಷೇಮ ಕೇಂದ್ರಗಳು, ರೋಗಿಗಳಿಗೆ ಸುರಕ್ಷಿತ ಆರೈಕೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದರು.