ನೀರು ಪೂರೈಕೆ
ಗದಗ ಬೆಟಗೇರಿ ಅವಳಿ ನಗರದಲ್ಲಿ ಸೆ. 27 ರಂದು ವಾರ್ಡ್ ನಂಬರ್ 29ರಲ್ಲಿ ರಾಜೀವ್ ಗಾಂಧಿನಗರ ಮನೆ ಲೈನ್, ಬಾಂಡ್ಗೆ ಲೈನ್, ಡಂಬಳವರ ಲೈನ್, ವಾರ್ಡ್ ನಂಬರ್ 14ರಲ್ಲಿ ಹಣಗಿ ಜೀನ್ ಅವರ್ ಲೈನ್, ಟಾಗೋರ್ ರೋಡ್ ಲೈನ್, ಕುರಡಗಿಯವರು ಲೈನ್, ಜನತಾ ಗುಡೌನ್ ಲೈನ್, ಕೊನ್ನುರು ಚಾಳ ಲೈನ್, ಮುಂಡರಗಿ ಲೈನ್, ವೆಂಕಟೇಶ್ ಟಾಕೀಸ್ ಲೈನ್, ಮಣಿಕಂಠ ಲೈನ್, ಕಟ್ಟಿ ಮನಿಯವರ ಲೈನ್, ವಾರ್ಡ್ ನಂಬರ್ 13ರಲ್ಲಿ ಹಾದಿಮನಿಯವರ ಲೈನ್, ಮಠದ ವಕೀಲರ ಲೈನ್, ಪೂಲೀಸ್ ಕ್ವಾರ್ಟಸ್, ಶಾಂತಗಿರಿ, ಕೋನಿಯಾರ್, ಪೂಜಾರಿ ಶೆಟ್ರ, ಕೆಸಿ ರಾಣಿ ರಸ್ತೆ, ಹೆಡ್ ಪೋಸ್ಟ್ ಲೈನ್, ಕಾರಂತ ಡಾಕ್ಟರ್ ಲೈನ್, ವಕೀಲ ಚಾಳ ಲೈನ್, ಗೋಮಸ್ ಬಿಲ್ಡಿಂಗ್ ಲೈನ್ ಸೇರಿದಂತೆ ಉಳಿದ ಕೆಲವು ಭಾಗಗಳು, ವಾರ್ಡ್ 16 ಡಿಸಿ ಮಿಲ್ ರಸ್ತೆ, ಹೊಂಬಳ ನಾಕಾ ವಾರ್ಡ್ 22ರಲ್ಲಿ ಗಂಗೆಮಡಿ ಭಾಗ 1, 2, 3, 4, 5 ವಾರ್ಡ್ 5,6,7 ರಲ್ಲಿ ಪನಿಭಂದ್ ರವರ ಲೈನ್, ತಬ್ಬಿಯವರ ಲೈನ್, ಶಿವಾಜಿ ನಗರದ ಕೆಲವು ಭಾಗಗಳು, ಪಂಚಲಕ್ಷಿ$್ಮಬಡಾವಣೆ ಕೆಲವು ಭಾಗಗಳು, ವಾರ್ಡ್ 19, 24,25 ರಲ್ಲಿ ಖಾನ್ ತೋಟ ಭಾಗ 1, 2, ಹಾವನೂರ್ ಲೈನ್, ಹಿಡಿಕಿ ಮಠ್ ಭಾಗ 1, 2 ಮತ್ತು ಕೊಡಿ ಅವರ ಲೈನ್, ಮುನ್ಸಿ ಪ್ರೆಸ್ ಬಟ್ಟರ್ ಲೈನ್, ಗುಂಜಿ ಸರ್ ಲೈನ್, ಕಾಗದಗೇರಿ ಹೊಸ ಲೈನ್, ಹಳೇ ಲೈನ್ ಹಾಗೂ ಪಿಎಂಟಿ ರಸ್ತೆ, ಕೊನೇರಿ ಹೊಂಡ, ಮದ್ಲಿ ಓಣಿ ಲೈನ್ಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಾಣಿಜ್ಯೋದ್ಯಮ ಸಂಸ್ಥೆ ಸಭೆ: ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವಾಷಿರ್ಕ ಸರ್ವ ಸಾಧಾರಣ ಸಭೆಯನ್ನು ಸೆ.27 ರಂದು ಸಂಜೆ 5ಕ್ಕೆ ಸಂಸ್ಥೆಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಸಭೆಯ ಅಧ್ಯತೆಯನ್ನು ಸಂಸ್ಥೆಯ ಅಧ್ಯ ಮದುಸೂಧನ ಪುಣೇಕರ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಹಣಕಾಸು ಶಿಕ್ಷಣ ಕುರಿತು ಉಪನ್ಯಾಸ. ಗದಗ: ವಿಜಯ ಪದವಿ ಪೂರ್ವ ಕಾಲೇಜಿನ ವಿದ್ಯಾಥಿರ್ಗಳಿಗೆ ಆಥಿರ್ಕ ಶಿಕ್ಷಣ ಮತ್ತು ಹೂಡಿಕೆ ಕುರಿತು ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಣಕಾಸು ತಜ್ಞ ವಿಜಯ ಮಹಾಂತೇಶ ಯರಗಂಬಳಿಮಠ ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಬ್ಯಾಂಕಿನ ಕಾರ್ಯಪದ್ಧತಿ, ವಿವಿಧ ವಿಭಾಗಗಳಿಗೆ ಸಾಲ ನೀಡುವ ಬಗ್ಗೆ ಹಾಗೂ ಬಡ್ಡಿ ದರ ವಿಧಿಸುವ ಬಗ್ಗೆ ಮಾಹಿತಿ ಮತ್ತು ಬ್ಯಾಂಕಿಂಗ್ ಪರೀೆಗಳನ್ನು ಎದುರಿಸುವ ಬಗ್ಗೆ ಉಪನ್ಯಾಸ ನೀಡಿದರು. ಸಂತೋಷ ಅಕ್ಕಿ, ಸಿ. ವಿ. ಬಡಿಗೇರ, ಶ್ರೀದೇವಿ, ಗಣೇಶ ಚಲವಾದಿ, ವಿಶಾಲಾ ಮೂಲಿಮನಿ ಹಲವರು ಉಪಸ್ಥಿತರಿದ್ದರು.
ಗವಾಯಿಗಳರವರ ಪುಣ್ಯಸ್ಮರಣೆಯ ನಿಮಿತ್ಯ ಪುಸ್ತಕ ವಿತರಣೆ:
ಗದಗ: ಗವಾಯಿಗಳರವರ ಪುಣ್ಯಸ್ಮರಣೆಯ ನಿಮಿತ್ಯ ಪಂಡಿತ ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ವತಿಯಿಂದ ಕಾಶೀಪೀಠದ ಸಂಸತ ಪಾಠಶಾಲೆಯ ವಿದ್ಯಾಥಿರ್ಗಳಿಗೆ ಪುಸ್ತಕ, ಪೆನ್ನು ವಿತರಣೆ ಮಾಡಲಾಯಿತು. ಶಿದ್ರಾಮಯ್ಯ ಕಟಗಿಹಳ್ಳಿಮಠ, ಬಸನಗೌಡ ಪಾಟೀಲ, ಗಂಗಾಧರ ಬೆನಕಲ್, ಮಹಾಂತೇಶ ಲಗಳಿ, ಬಸವರಾಜ ದಾವಣಗೇರಿ, ಶರಣಪ್ಪ ಮೇಟಿ, ಈಶಪ್ಪ ಅಂಗಡಿ, ಭೀಮಪ್ಪ ಮೋಖಾಶಿ ಹಲವರು ಇದ್ದರು.
43 ಜನರಿಂದ ರಕ್ತದಾನ ಗದಗ: ನಗರದ ಬಸವೇಶ್ವರ ಸರ್ಕಲ್ ಬಳಿ ತರುಣ ವ್ಯಾಪಾರಸ್ಥರ ಸಂ ಪ್ರತಿಷ್ಠಾಪಿಸಿದ 47ನೇ ವರ್ಷದ ಗಜಾನನೋತ್ಸವ ಅಂಗವಾಗಿ ರವಿವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 43 ಜನರು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೇತ್ರದಾನ ಮಾಡುವಂತೆ ಜಾಗ್ರತಿ ಮೂಡಿಸಿ ಕರಪತ್ರ ವಿತರಿಸಲಾಯಿತು. 280ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಗದಗ&ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯೆ ರಮೇಶ ಶಿಗ್ಲಿ, ಕಾರ್ಯದಶಿರ್ ಪ್ರವಿಣ ವಾರಕರ, ಮಹಿಳಾ ಟಕದ ಅಧ್ಯೆ ಸಾವಿತ್ರಿ ಶಿಗ್ಲಿ, ಕಾರ್ಯದಶಿರ್ ಅಮೃತಾ ವಾರಕರ ಇದ್ದರು.
ಮಹಾ ಅನ್ನಸಂತರ್ಪಣೆ: ಗದಗ: ಹಣ್ಣು ಮತ್ತು ಕಿರುಕೋಳ ವ್ಯಾಪಾರಸ್ಥರ ಸಂದ ವತಿಯಿಂದ ಸೆ.28 ರಂದು ಮಧ್ಯಾಹ್ನ 1ಕ್ಕೆ ಈದ ಮೀಲಾದ ಉನಬಿ ಹಬ್ಬದ ನಿಮಿತ್ಯ ನಗರದ ಬ್ಯಾಂಕ ರಸ್ತೆಯ ಜನತಾ ಬಜಾರನಲ್ಲಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉಚಿತ ತರಬೇತಿಗಾಗಿ ಅಜಿರ್ ಆಹ್ವಾನ
ಗದಗ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ದತಾ ಮತ್ತು ಕುಶಲತಾ ಸಂಪನ್ನ ಹಿತಗ್ರಾಹಿ ಯೋಜನೆಯಡಿ ಟೈಲರಿಂಗ್ ಕೋರ್ಸ್ ಉಚಿತ ತರಬೇತಿ ನೀಡಲು ಅಜಿರ್ಗಳನ್ನು ಆಹ್ವಾನಿಸಲಾಗಿದೆ. ಅಭ್ಯಥಿರ್ಗಳಿ ಮಾಹಿತಿಗಾಗಿ 9844236030 / 8951625867 ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.