ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸೌಲಭ್ಯಗಳ ಹಸತಾಂತರ ಕಾರ್ಯಕ್ರಮವನ್ನು ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಿದರು. ಸಂಸದ ಈ.ತುಕಾರಾಮ್, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾನ್ ನಿಯಾಜಿ, ಡಿ.ಎಚ್.ಒ.ಶಂಕರ್‌ನಾಯ್ಕ, ಬಿಎಂಎಂ ಮುಖ್ಯಸ್ಥ ಗಣೇಶ್ ಹೆಗಡೆ ಇತರರಿದ್ದರು. 
ಜಿಲ್ಲೆ

ಜೀವ ಉಳಿಸಲು ತಕ್ಷಣದ ಚಿಕಿತ್ಸೆ ಅಗತ್ಯ

ಹೊಸಪೇಟೆ: ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಿಕಿತ್ಸೆ ದೊರೆತರೆ ಅಮೂಲ್ಯ ಜೀವಗಳನ್ನು ಉಳಿಸಬಹುದು ಅಂಥ ಸುವರ್ಣ ಸಮಯಕ್ಕೆ ಸೇವೆ ನೀಡಲು ಅಂಬುಲೆನ್ಸ್‌ಗಳನ್ನು ಬಿ.ಎಂ.ಎಂ ಸಂಸ್ಥೆ ಕೊಡುಗೆಯಾಗಿ ನೀಡಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಗೆ ಬಿಎಂಎಂ ಕಂಪನಿಯಿಂದ ವಿವಿಧ ಸೌಲಭ್ಯಗಳ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಸ್ಪತ್ರೆಯಲ್ಲಿ ಒಳ ರೋಗಿಗಳ ಸಹಾಯಕರಿಗೆ ಡಾರ್ಮೆಂಟರಿ ಅನುಕೂಲವಾಗಲಿದೆ. ನಿತ್ಯ ಬಳಕೆಯ ಬಟ್ಟೆಗಳನ್ನು ಶುಚಿಗೊಳಿಸಿ ನೈರ್ಮಲ್ಯ ಕಾಪಾಡಲು ಆಧುನಿಕ ಯಂತ್ರಗಳ ಜತೆ ಲ್ಯಾಂಡ್ರಿ ಕೊಠಡಿ ನಿರ್ಮಿಸಲಾಗಿದೆ. ಎರಡು ಹಾಗೂ ವೈಕುಂಠ ವಾಹನ ನೀಡಲಾಗಿದೆ. ಇವುಗಳ ನಿರ್ವಹಣೆ ಹಾಗೂ ಸೇವೆ ನೀಡುವುದು ಮುಖ್ಯವಾಗಿದೆ ಎಂದರು.

ಸಂಸದ ಈ.ತುಕಾರಾಮ್ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಸೇವೆ ಸಾರ್ವಜನಿಕರಿಗೆ ಅನುಕೂಲ ಆಗಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡಜನರು ಬರುತ್ತಾರೆ. ಅವರ ಸೇವೆಯಿಂದ ಉತ್ತಮ ಸಮಾಜ ನಿರ್ಮಿಸೋನ ಎಂದರು.