ಜಿಲ್ಲೆ

ಕಟ್ಟುಪಾಟು ಕೈಬಿಟ್ಟು ಆಧುನಿಕತೆ ಪಾಲಿಸಿ

Chitradurga

ಐಮಂಗಲ: ಸಿದ್ಧ ಪರಂಪರೆ ಹಾಗೂ ಸಾತ ಸಂಪ್ರದಾಯ ಜಾತ್ಯಾತೀತವಾಗಿವೆ ಎಂದು ಯಾದವ ಮಠದ ಶ್ರೀ ಕೃಷ್ಣ ಯದವಾನಂದ ಸ್ವಾಮೀಜಿ ಹೇಳಿದರು.

ನಿವೃತ್ತ ಪ್ರಾಚಾರ್ಯ ಜಿ.ಪರಮೇಶ್ವರಪ್ಪ ಕಪಿಲೆಹಟ್ಟಿ ಅವರ ವಿರಚಿತ ವದ್ದಿಕೆರೆ ಸಿದ್ದೇಶ್ವರ ಚರಿತೆ ಪಾರಾಯಣಕ್ಕೆ ಹೋಬಳಿಯ ಕಲ್ಲಹಟ್ಟಿ ಗ್ರಾಮದ ತಿಮ್ಮಪ್ಪಸ್ವಾಮಿ ದೇಗುಲದಲ್ಲಿ ಮಂಗಳವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.

ಯಾವ ಸಮಾಜ ಮಹಿಳೆಯರನ್ನು ಗೌರವಿಸುತ್ತದೆಯೋ ಅಂತಹ ಸಮಾಜ ಸಶಕ್ತವಾಗಿರುತ್ತದೆ. ಯಾದವ ಸಮುದಾಯದ ಹೆಣ್ಣುಮಕ್ಕಳು ಮೌಢ್ಯಾಚಾರಣೆ ತೊರೆದು ಆಧುನಿಕತೆಗೆ ಒಗ್ಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯಾದವ ಕುಲದಲ್ಲಿ ಜನಿಸಿದ ನಮ್ಮ ಹಿರಿಯರು ವೀರರಾಗಿದ್ದು ಸತ್ಯವಂತರೆನನಿಸಿಕೊಂಡಿದ್ದಾರೆ. ವದ್ದಿಕೆರೆ ಸಿದ್ದೇಶ್ವರ, ರೇವಣ ಸಿದ್ದೇಶ್ವರ, ಹೆಂಜೇರು ಸಿದ್ದೇಶ್ವರರು ಸಮಾಜದ ಮೌಢ್ಯ, ಕಂದಾಚಾರ, ವಾಮಾಚಾರಗಳ ವಿರುದ್ಧ ನಿರಂತರ ಹೋರಾಟ ನಡೆಸಿ ಅವುಗಳಿಂದ ದೂರವಿರುವಂತೆ ಎಚ್ಚರಿಸಿದ್ದಾರೆ ಎಂದರು.

ನಿವೃತ್ತ ಬಿಇಒ ತಿಮ್ಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಜಿ.ಮಲ್ಲಪ್ಪ, ಎಸ್.ಪಾತಯ್ಯ, ಜಿಪಂ ಮಾಜಿ ಸದಸ್ಯ ಚಿಕ್ಕಪ್ಪ, ಸಿ.ತಿಪ್ಪೇಸ್ವಾಮಿ, ಬೀರೇನಹಳ್ಳಿ ಈರಣ್ಣ, ಕಸವನಹಳ್ಳಿ ಶಿವಣ್ಣ, ನೆರೆನಹಾಳ್ ಶಿವಲಿಂಗಪ್ಪ, ಕಾಟಪ್ಪನಹಟ್ಟಿ ನಿಜಲಿಂಗಪ್ಪ ಇದ್ದರು.