ಐಮಂಗಲ: ಗ್ರಾಮದಲ್ಲಿರುವ ಭರಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಕಡಲೆ ಖರೀದಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಆರ್.ಹರೀಶ್ ಮಾತನಾಡಿ, ಸರ್ಕಾರ ನಿಗದಿ ಪಡಿಸಿದಂತೆ ಪ್ರತಿ ರೈತರಿಂದ 3 ಕ್ವಿಂಟಲ್‌ನಿಂದ ಗರಿಷ್ಠ 10 ಕ್ವಿಂಟಲ್ ವರೆಗೆ ಕಡಲೆ ಖರೀದಿಸಲು ಅವಕಾಶವಿದೆ. ಬೆಂಬಲ ಬೆಲೆ 4875 ರೂ. ನೀಡಲಾಗುವುದು ಎಂದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ನ್ಯಾಪೆಡ್ ಸಂಸ್ಥೆ ಹಾಗೂ ಭರಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದೊಂದಿಗೆ ಈ ಖರೀದಿ ಕೇಂದ್ರ ಆರಂಭಿಸಲಾಗಿದೆ. ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಸಿಬ್ಬಂದಿಗೆ ಸಲಹೆ ನೀಡಿದರು.
ಉಪಾಧ್ಯಕ್ಷ ಮೇಘನಾಥರೆಡ್ಡಿ, ಕಾರ್ಯದರ್ಶಿ ಭುವನೇಶ್, ನಿರ್ದೇಶಕರಾದ ರುದ್ರಪ್ಪ, ಬಸಪ್ಪ, ಪರಮೇಶ್ವರಪ್ಪ, ಗಿರಿಯಪ್ಪ, ಗುರುಸಿದ್ದಪ್ಪ, ಶಾರದಮ್ಮ, ಆರ್.ಕುಣಮಪ್ಪ, ತಿಪ್ಪೇಸ್ವಾಮಿ ಇದ್ದರು.