ಜಿಲ್ಲೆ

ತರಬೇತಿ ವೇಳೆ ಜಾಗರೂಕತೆ ಅವಶ್ಯ

Chitradurga

ಐಮಂಗಲ: ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿ ಪರಸ್ಪರ ಅಂತರ, ಮಾಸ್ಕ್ ಧರಿಸಿಕೊಳ್ಳಬೇಕು ಎಂದು ದಾವಣಗೆರೆ ಪೂರ್ವ ವಲಯ ಐಜಿಪಿ ಎಸ್.ರವಿ ಸೂಚಿಸಿದರು.

ಗ್ರಾಮದ ಪೊಲೀಸ್ ತರಬೇತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿ, ಕರೊನಾ ಸಂದರ್ಭದಲ್ಲಿ ತರಬೇತಿ ಪಡೆಯುತ್ತಿರುವ ನೀವು ಅತ್ಯಂತ ಜಾಗರೂಕರಾಗಿರಬೇಕು. ವೈಯಕ್ತಿಕ ಸುರಕ್ಷತೆ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು.

ಆರ್‌ಪಿಐ ಬಿ.ಪರಶುರಾಮ್ ನೇತೃತ್ವದಲ್ಲಿ ಗೌರವವಂದನೆ ಸಲ್ಲಿಸಲಾಯಿತು. ಎಸ್‌ಪಿ ಜಿ.ರಾಧಿಕಾ, ಪ್ರಾಂಶುಪಾಲ ಪಾಪಣ್ಣ ಇತರರಿದ್ದರು.