ಜಿಲ್ಲೆ

ಸಾಧನೆಗೆ ವಿದ್ಯಾರ್ಥಿಗಳು ಮುಂದಾಗಲಿ

ಐಮಂಗಲ: ವಿದ್ಯಾರ್ಥಿಗಳು ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಉಪನ್ಯಾಸಕ ಡಾ.ಬಿ.ಕೃಷ್ಣಪ್ಪ ಸಲಹೆ ನೀಡಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಮತದಾರರ ದಿನಾಚರಣೆಯಲ್ಲಿ ಮಾತನಾಡಿದರು. ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪ್ರಾಂಶುಪಾಲ ವಿ.ಎಸ್.ಸಜ್ಜನ್ ಮಾತನಾಡಿದರು. ಉಪನ್ಯಾಸಕರಾದ ಎಂ.ರಮೇಶ್, ರಂಗಸ್ವಾಮಿ, ಪೆನ್ನಯ್ಯ, ಎಸ್.ಬಿ.ರವಿ, ಎಂ.ಕೆ.ಮಂಜುನಾಥ್, ಹುಸೇನ್‌ಸಾಬ್, ಸಿಬ್ಬಂದಿ ಸುಧಾಮಣಿ, ಟಿ.ಎಲ್.ಬಸವರಾಜಪ್ಪ, ಸಿ.ರಾಧಾಕೃಷ್ಣ ಇದ್ದರು.