ಜಿಲ್ಲೆ

ಜ್ಞಾನದ ಬೆಳಕು ಕಾರ್ಯಕ್ರಮ

Chitradurga

ಐಮಂಗಲ: ಗ್ರಾಮ ಹೊರವಲಯದ ಮಹಾ ಶಿವಶರಣ ಹರಳಯ್ಯ ಗುರುಪೀಠದ ಆವರಣದಲ್ಲಿ ಜ.2ರ ಸಂಜೆ 6.30ಕ್ಕೆ ಜ್ಞಾನದ ಬೆಳಕು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೀಬಾರದ ಮೇದಾರ ಕೇತಯ್ಯ ಮಠದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕಲಾವಿದರಾದ ನಾಗರಾಜ್, ಬಿಸ್ನಳ್ಳಿ ಜಯ್ಯಪ್ಪ, ಮಾದಿಗ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಚಂದ್ರಪ್ಪ, ಶಿಕ್ಷಕ ಜಿ.ಸಿ.ಎಚ್.ಗೊಂಚಿಕಾರ್, ಹಾಸ್ಯ ಕಲಾವಿದರಾದ ಜಗನ್ನಾಥ್, ಜೆಡಿಎಸ್ ಮುಖಂಡರಾದ ಗೀತಾ, ಸಾಹಿತಿಗಳಾದ ಗೋಂದಾಳಪ್ಪ, ನಾಗರಾಜ ಸಂಗಂ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪೀಠಾಧಿಪತಿ ಶ್ರೀ ಬಸವಹರಳಯ್ಯ ಸ್ವಾಮೀಜಿ ತಿಳಿಸಿದ್ದಾರೆ.