ಐಮಂಗಲ: ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಪಿಎಸ್‌ಐ ಎ.ಮಂಜುನಾಥ್ ಮನವಿ ಮಾಡಿದರು.
ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಸಭೆಯಲ್ಲಿ ಮಾತನಾಡಿ, ದಿನೇ ದಿನೆ ಹೆಚ್ಚುತ್ತಿರುವ ವೈರಸ್‌ನ್ನು ಸ್ವಚ್ಛತೆ, ಮಾಸ್ಕ್ ಧಾರಣೆ, ಪರಸ್ಪರ ಅಂತರ ಕಾಯ್ದುಕೊಳ್ಳುವ ವಿಧಾನದ ಮೂಲಕ ದೂರಗೊಳಿಸಬಹುದು ಎಂದರು.
ಪ್ರೊಬೇಷನರಿ ಎಸ್ಸೈ ಪರಶುರಾಮ್, ಸಿಬ್ಬಂದಿಗಳಾದ ಗುರುಮೂರ್ತಿ, ವೀರೇಶ್, ಸೈಯದ್ ಖಾಸಿಂ, ಗ್ರಾಮಸ್ಥರಾದ ಎಚ್.ಎಸ್.ಸುರೇಶ್, ಬಿ.ಟಿ. ನಾರಾಯಣರೆಡ್ಡಿ, ಇಬ್ರಾಹಿಂ, ಗೌಸ್‌ಖಾನ್, ಮಂಜುನಾಥ್, ಜಯಣ್ಣ, ಪ್ರಹ್ಲಾದ್ ಇತರರಿದ್ದರು.