ಐಮಂಗಲ: ಹೋಬಳಿಯ ಹರ್ತಿಕೋಟೆ, ಯರಬಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಸಂಜೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಯಿತು.
ಹರ್ತಿಕೋಟೆಯಲ್ಲಿ ಗಾಳಿಯ ರಭಸಕ್ಕೆ ನಾಲ್ಕಾರು ಮರಗಳು, ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಹೋಟೆಲ್, ಚನ್ನಮ್ಮನಹಳ್ಳಿಯಲ್ಲಿ ಮನೆಯ ಸೀಟುಗಳು ಹಾರಿ ಹೋಗಿವೆ.