ಐಮಂಗಲ: ಹೋಬಳಿಯ ಎಂ.ಡಿ.ಕೋಟೆ ಮದ್ದನಕುಂಟೆ ಗ್ರಾಮದ ಮಧ್ಯೆ ಚೌಡಮ್ಮನಹಳ್ಳ ಕ್ರಾಸ್ ಬಳಿ ಶನಿವಾರ ಬೈಕ್‌ನಲ್ಲಿ ಆಯತಪ್ಪಿ ಬಿದ್ದು ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.
ಚಿತ್ರದುರ್ಗ ತಾಲೂಕು ಜೆ.ಎನ್.ಕೋಟೆ ಗ್ರಾಮದ ನಾಗರಾಜು (35) ಮೃತ ವ್ಯಕ್ತಿ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ತಿಮ್ಮಣ್ಣನಿಗೆ ಗಾಯಗಳಾಗಿದ್ದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.