ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಕೆಸರಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಹನುಮಗೌಡ, ಶರಣಪ್ಪ ಕಟ್ಟಿಮನಿ, ಹನುಮಂತ ಕೆಸರಟ್ಟಿ, ನಾಗಪ್ಪ, ಹನುಮಪ್ಪ ಕುರಿ, ಬಸವರಾಜ, ಹನುಮನಗೌಡ, ಗದ್ದೆಪ್ಪ, ಗಿರಿಯಪ್ಪ, ಮುತ್ತಪ್ಪ, ಹನುಮಪ್ಪ, ನರಸಪ್ಪ, ರಾಮಣ್ಣ ಇತರರಿದ್ದರು. 
ಜಿಲ್ಲೆ

ಗ್ರಾಮದ ಬಳಿ ಸ್ಮಶಾನಕ್ಕೆ ಜಾಗ ಕಲ್ಪಿಸಿ

ಲಿಂಗಸುಗೂರು: ತಾಲೂಕಿನ ಕೆಸರಟ್ಟಿ ಗ್ರಾಮದ ಸರ್ವೇ ನಂ.35/1 ರ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಕಾಯ್ದಿರಿಸಿದ ಒಂದು ಎಕರೆ ಜಮೀನಿನ ಬದಲಾಗಿ ಈ ಹಿಂದೆ ನೀಡಿದ್ದ ಸರ್ವೇ ನಂ.1 ರಲ್ಲಿ ಸ್ಮಶಾನ ಜಾಗೆ ನೀಡಬೇಕೆಂದು ಒತ್ತಾಯಿಸಿ ಕೆಸರಟ್ಟಿ ಗ್ರಾಮಸ್ಥರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಗುರುವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಈ ಹಿಂದೆ ಅಮರೇಗೌಡ ಈಚನಾಳ ಅವರ ಸರ್ವೇ ನಂ.1* ಹಿಸ್ಸಾ* 14.25 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನನ್ನು ಸರ್ಕಾರ 14 ಲಕ್ಷ ರೂ.ಗೆ ಖರೀದಿಸಿ ಸಾರ್ವಜನಿಕ ಸ್ಮಶಾನಕ್ಕೆ ನೀಡಲಾಗಿತ್ತು. ಆದರೆ ಸದರಿ ಜಮೀನಿನ ಮಾಲೀಕ ಅಮರೇಗೌಡ ಈಚನಾಳಗೆ ಸರ್ಕಾರದಿಂದ 14 ಲಕ್ಷ ರೂ. ನೀಡಿಲ್ಲ. ಇದರಿಂದ ಜಮೀನಿನ ಮಾಲೀಕರು ಶವಸಂಸ್ಕಾರಕ್ಕೆ ಅನುಮತಿ ನೀಡುತ್ತಿಲ್ಲ ಎಂದರು.