ಹಟ್ಟಿಚಿನ್ನದಗಣಿ: ಪಟ್ಟಣಕ್ಕೆ ಜನಸಂಖ್ಯೆ ಆಧಾರದ ಮೇರೆಗೆ ಬಸ್ ಡಿಪೋ ಮಂಜೂರಾತಿ ಮಾಡಲು ಒತ್ತಾಯಿಸಿ ಹಟ್ಟಿ ಪಟ್ಟಣ ನಾಗರಿಕ ಸಮಿತಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮಂಗಳವಾರ ಮನವಿ ಸಲ್ಲಿಸಿತು.
2011ರ ಜನಗಣತಿಯ ಪ್ರಕಾರ ಹಟ್ಟಿ ಪಟ್ಟಣದಲ್ಲಿ 29,814 ಜನಸಂಖ್ಯೆವಿದೆ. ಹಟ್ಟಿ ಪಟ್ಟಣದಲ್ಲಿ ಸ್ಥಳೀಯರು ಶೇ.40ರಷ್ಟು ಜನರಿದ್ದು, ಬೇರೆ ಕಡೆಯವರು ಶೇ.60 ಜನತೆ ಪಟ್ಟಣದಲ್ಲಿ ವಾಸಮಾಡುತಿದ್ದಾರೆ. ಹೊರ ರಾಜ್ಯ, ಜಿಲ್ಲೆವರಿಗೆ ಸ್ವಗ್ರಾಮಕ್ಕೆ ಹೋಗಿ ಬರಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ.
ಅಲ್ಲದೇ 15ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಬೆಂಗಳೂರು ನಗರಕ್ಕೆ ಸಂಚರಿಸುತ್ತವೆ. ಹಾಗಾಗಿ ಹಟ್ಟಿ ಪಟ್ಟಣಕ್ಕೆ ಹೊಸ ಬಸ್ ಡಿಪೋಗಾಗಿ ಹಟ್ಟಿಚಿನ್ನದ ಗಣಿ ಕಂಪನಿಯವರು ಸಿಎಸ್‌ಆರ್ ನಿಧಿಯಲ್ಲಿ ಮಂಜೂರು ಮಾಡಲು ಆದೇಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.