ಮಂಗಳೂರು: ಭಾರತೀಯ ವೈದ್ಯರ ಸಂಘದ (ಐಎಂಎ) ಮಂಗಳೂರು ಘಟಕದ ಮಾಸಿಕ ಸಭೆಯಲ್ಲಿ ಯೂನಿಯನ್ ಬ್ಯಾಂಕಿನ ಡಿಜಿಎಂ ಮಹೇಶ್ ಜೆ. ಅವರು ವೈದ್ಯರು ಹಾಗೂ ಬ್ಯಾಂಕ್‌ಗಳ ಸಹಯೋಗದ ಕುರಿತು ಉಪನ್ಯಾಸ ನೀಡಿದರು.
ಲೆಕ್ಕ ಪರಿಶೋಧಕ ಶ್ಯಾಮ್ ಭಟ್ ಅವರು ಆದಾಯ ತೆರಿಗೆಯ ಬಗ್ಗೆ ಮಾಹಿತಿ ನೀಡಿದರು. ಐಎಂಎ ಉಪಾಧ್ಯಕ್ಷ ಡಾ.ಎ.ಹರೀಶ್ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಬ್ಯಾಂಕಿನ ಜನರಲ್ ಮ್ಯಾನೇಜರ್ ರೇನು ಕೆ.ನಾಯರ್ ಮುಖ್ಯ ಅತಿಥಿಯಾಗಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಅರ್ಚಿತ್ ಬೋಳೂರ್ ಮಾಸಿಕ ವರದಿ ಮಂಡಿಸಿದರು.