ಜಿಲ್ಲೆ

Liquor ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 92 ಸಾವಿರ ರೂ. ಅಕ್ರಮ ಗೋವಾ ಮದ್ಯ ವಶ

Uttara Kannada - Subash Hegde

ಕಾರವಾರ: ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 92 ಸಾವಿರ ರೂ. ಮೌಲ್ಯದ ಅಕ್ರಮ ಗೋವಾ ಸಾರಾಯಿ  ಯನ್ನು ಅಬಕಾರಿ ಅಧಿಕಾರಿಗಳು ಗುರುವಾರ ರಾತ್ರಿ ಮಾಜಾಳಿ ತನಿಖಾ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಗೆ ಸೇರಿದ ಬಸ್ 73.500 ಲೀಟರ್ ಗೋವಾ ಮದ್ಯ ಹಾಗು 3.9 ಲೀಟರ್ ಬೀಯರ್ ಕಂಡುಬಂದಿದ್ದು, ಚಾಲಕನನ್ನು ಬಂಧಿಸಿ, ಬಸ್‌ನ್ನು ಜಪ್ತು ಮಾಡಲಾಗಿದೆ.

Liquor ಸಾಕಷ್ಟು ವಿವಾದ 

ಮಾಜಾಳಿ ತನಿಖಾ ಠಾಣೆಯು ಸಾಕಷ್ಟು ವಿವಾದ ಹುಟ್ಟಿಸಿದೆ. ಠಾಣೆಯ ಇನ್ಸ್‌ಪೆಕ್ಟರ್‌ ಡ್ರೈವರ್‌ ಒಬ್ಬರಿಗೆ ಹೊಡೆದ ವಿಚಾರ ಆಕ್ಷೇಪಕ್ಕಾ ಕಾರಣವಾಗಿ ಅಬಕಾರಿ ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಯನ್ನ ಬೇರೆಡೆ ನಿಯೋಜಿಸಲಾಗಿತ್ತು. ಗೋವಾದಿಂದ ಮತ್ತೆ ಅಕ್ರಮ ಸಾರಾಯಿ ಸಾಗಣೆ ಹೆಚ್ಚಿದೆ ಎಂದು ಸಂಘಟನೆಗಳು ದೂರಿದ್ದವು.