ಜಿಲ್ಲೆ

Illigal Liquor: 2 ಬಿಯರ್ ಮ್ಯಾನ್ ಗಳ ಬಂಧನ

Uttara Kannada - Subash Hegde
ಕಾರವಾರ: ಹೊಸ ವರ್ಷ ಆಗಮಿಸುತ್ತಿದೆ. ಮದ್ಯಕ್ಕೆ (Liquor) ಬೇಡಿಕೆ ಹೆಚ್ಚಿದೆ. ಅದರಲ್ಲೂ ಗೋವಾ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಇದರಿಂದ ಕಳ್ಳಸಾಗಣೆದಾರರು ಮದ್ಯ ಸಾಗಣೆಗೆ ಭಿನ್ನ, ಭಿನ್ನ ರೂಪ ಉಪಯೋಗಿಸುತ್ತಿದ್ದಾರೆ. ಗೋವಾದಿಂದ ಕಾರವಾರಕ್ಕೆ ಬರುತ್ತಿದ್ದ ಗೋವಾ ರಾಜ್ಯದ ಕದಂಬ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಕಾರವಾರ ಬಸ್ ನಿಲ್ದಾಣದಲ್ಲಿ  ಪರಿಶೀಲನೆ ನಡೆಸಿದ ಅಬಕಾರಿ ವಿಶೇಷ ಗಸ್ತು ತಂಡದ ಅಧಿಕಾರಿಗಳಿಗೆ ಅಚ್ಚರಿ ಕಾದಿತ್ತು.
ಮೈತುಂಬ  Liquor
ಬಸ್‌ನಲ್ಲಿದ್ದ ಇಬ್ಬರು ಮೈ ತುಂಬ ಮದ್ಯದ ಬಾಟಲಿಗಳನ್ನು ಕಟ್ಟಿಕೊಂಡು ಕಾರವಾರದೆಡೆಗೆ ಪ್ರಯಾಣಿಸುತ್ತಿದ್ದರು. ಕಾರವಾರ ಹೈಚರ್ಚ್ ರಸ್ತೆಯ ಪ್ರವೀಣ ಪಾಂಡುರಂಗ ಗೋಕರ್ಣ ಹಾಗೂ ಸೋನಾರವಾಡದ ಬಾಬು ರಾಜನ್ ಪಿಳ್ಳೆ ಎಂಬುವವರನ್ನು ಬಂಧಿಸಿದ್ದಾರೆ. ಅವರು, ಕಾಲು, ಕೈ, ಹೊಟ್ಟೆ ಎಲ್ಲ ಕಡೆ ಮದ್ಯದ ಬಾಟಲಿ ಕಟ್ಟಿಕೊಂಡು ಮೇಲಿಂದ ಅಂಗಿ ಹಾಕಿ ಕುಳಿತಿದ್ದರು. ಇಬ್ಬರಿಂದ ಒಟ್ಟು ಸುಮಾರು 52,400 ರೂ. ಮೌಲ್ಯದ 65.25 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದು, ಇಬ್ಬರನ್ನೂ ಬಂಽಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಬಕಾರಿ ಡಿಸಿ ಮಾರ್ಗದರ್ಶನದಲ್ಲಿ ನಿರೀಕ್ಷಕ ವಿಜಯ ಮಹಾಂತೇಶ ಲಮಾಣಿ, ಉಪ ನಿರೀಕ್ಷಕ ನಾಗರಾಜ ಕೊಟ್ಟಿಗಿ, ಮುಖ್ಯ ಪೇದೆ ಕುಂದಾ ನಾಯ್ಕ, ಕೃಷ್ಣ ನಾಯ್ಕ, ವಾಹನ ಚಾಲಕ ರವೀಂದ್ರ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: https://www.vijayavani.net/container-burned https://youtu.be/K7CTaSaPVlU