ಕಾರವಾರ: ಅನುಮತಿ ಇಲ್ಲದ ಬಾಡಿಗೆ ಬೈಕ್‌ಗಳನ್ನು ಗೋಕರ್ಣ ರೋಡ್ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತಿದ್ದು, ಅದರ ವಿರುದ್ಧ ಕ್ರಮ ವಹಿಸುವಂತೆ ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೊಂಕಣ ರೈಲ್ವೆ ಪ್ರಾದೇಶಿಕ ಪ್ರಬಂಧಕರಿಗೆ ಪತ್ರ ಬರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ ನಾಯಕ ಎಂಬುವವರು ದೂರು ನೀಡಿದ್ದು, ಮಾರ್ಚ್ ತಿಂಗಳಲ್ಲೇ ಅನುಮತಿ ಮುಕ್ತಾಯವಾಗಿರುವ 6 ಬೈಕ್‌ಗಳನ್ನು ಇಟ್ಟಿರುವುದು ಕಂಡುಬರುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಅನುಮತಿ ಇಲ್ಲದ ಬೈಕ್‌ಗಳಿಗೆ ಅನುಮತಿ ನೀಡುವುದು ಸರಿಯಲ್ಲ. ಈ ಕುರಿತು ಕ್ರಮ ವಹಿಸಬೇಕು ಎಂದು ಸಾರಿಗೆ ಅಕಾರಿಗಳು ಕೊಂಕಣ ರೈಲ್ವೆಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಅಧಿಕಾರಿಗಳ ಬೆಂಬಲ ಆರೋಪ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿರಾಜೀವ ಗಾಂವಕರ್ ಕೊಂಕಣ ರೈಲ್ವೆ ಅಧಿಕಾರಿಗಳ ಬೆಂಬಲವಿಲ್ಲದೇ ಈ ಕಾರ್ಯ ಸಾಧ್ಯವಿಲ್ಲ. ಇಂಥ ಅಕ್ರಮಗಳ ವಿರುದ್ಧ ಕೇಂದ್ರ ರೈಲ್ವೆ ಸಚಿವರಿಗೆ ರೈಲ್ವೆ ವಿಜಿಲೆನ್ಸ್ಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.