ರಟ್ಟಿಹಳ್ಳಿ: ಅಕ್ರಮವಾಗಿ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಽಸಿ ಆತನಿಂದ ೨೫ ಕೆ.ಜಿ. ದನದ ಮಾಂಸ ವಶಪಡಿಸಿಕೊಂಡ ಘಟನೆ ಇಲ್ಲಿಯ ತುಮ್ಮಿನಕಟ್ಟಿ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಇಲ್ಲಿಯ ಕೆಳಗಿನ ಓಣಿಯ ಮರ್ದಾನಅಲಿ ಮಕಬೂಲಸಾಬ ಮುಲ್ಲಾ (೨೪) ಬಂಽತ ಆರೋಪಿ.
ಈತ ಯಾವುದೇ ಅನುಮತಿ ಪಡೆಯದೆ ಶೆಡ್ಡವೊಂದರಲ್ಲಿ ಅಕ್ರಮವಾಗಿ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.