ಜಿಲ್ಲೆ

ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯ ವಶಕ್ಕೆ

ಎಂ.ರವಿ

ಕೊಳ್ಳೇಗಾಲ: ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ರಾತ್ರಿ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 90 ಎಂ.ಎಲ್‌ನ 104 ಪೌಚ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ತಾಲೂಕಿನ ಪ್ರಕಾಶಪಾಳ್ಯ ಗ್ರಾಮದ ಜಯಜ್ಯೋತಿ ಮೇರಿ ಎಂಬಾಕೆ ಮನೆಯ ಮುಂಭಾಗ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಅವರಿಂದ 90 ಎಂ.ಎಲ್‌ನ 74 ಪೌಚ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ತಿಮ್ಮರಾಜೀಪುರ ಗ್ರಾಮದಲ್ಲಿ ಲಿಂಗರಾಜಮ್ಮ ಎಂಬಾಕೆ ಮನೆ ಮುಂಭಾಗ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ 90 ಎಂ.ಎಲ್‌ನ 30 ಪೌಚ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಚೆಲುವರಾಜು, ಎಎಸ್‌ಐ ಮಲ್ಲಿಕಾರ್ಜುನ, ಮಹಿಳಾ ಕಾನ್‌ಸ್ಟೇಬಲ್ ಅಮೂಲ್ಯಾ ಭಾಗವಹಿಸಿದ್ದರು.