ಗೊಳಸಂಗಿ: ಕೂಡಗಿ ಎನ್ಟಿಪಿಸಿ ಇತ್ತೀಚೆಗೆ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಲಾಗಿದೆ ಎಂದು ಲಿಖಿತ ಪರೀೆ ಬರೆದ ಭೂ ಸಂತ್ರಸ್ತರ ಪರೀಾರ್ಥಿಗಳು ಆರೋಪಿಸಿದ್ದಾರೆ.
ಎನ್ಟಿಪಿಸಿಯಲ್ಲಿ ಖಾಲಿ ಇರುವ ಫಿಟ್ಟರ್, ಇಲೆಕ್ಟ್ರಿಷಿಯನ್, ಇನ್ಸು$್ಟ್ರಮೆಂಟ್ ಮೆಕ್ಯಾನಿಕ್, ಮೆಟರಿಯಲ್/ ಸ್ಟೋರ್ ಕೀಪರ್ ಸೇರಿ 34 ಹುದ್ದೆಗೆ ಆ.11ರಂದು ಎನ್ಟಿಪಿಸಿ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಭೂ ಸಂತ್ರಸ್ತ 73 ಅಭ್ಯರ್ಥಿಗಳು ಲಿಖಿತ ಪರೀೆ ಬರೆದಿದ್ದಾರೆ.
ನ. 6 ರಂದು 20 ಅಭ್ಯರ್ಥಿಗಳಿಗೆ ಮಾತ್ರ ಅವರ ಇ& ಮೇಲ್ಗೆ ಲಿತಾಂಶ ಪ್ರಕಟಿಸಿ ನೇಮಕಾತಿ ಮಾಡಿಕೊಂಡಿದ್ದಾರೆ. ಬಾಕಿ 53 ಅಭ್ಯರ್ಥಿಗಳ ಲಿತಾಂಶ, ಕಟ್ಆ್ ಅಂಕಗಳನ್ನೂ ವೆಬ್ಸೈಟ್ನಲ್ಲಿ ಪ್ರಕಟಿಸಿಲ್ಲ. ಈ ಕುರಿತು ಪರೀಾರ್ಥಿಗಳು ನ.8ರಂದು ಎನ್ಟಿಪಿಸಿಯ ಎಚ್ಆರ್ ವಿಭಾಗದ ಮುಖ್ಯಸ್ಥರನ್ನು ಪ್ರಶ್ನಿಸಲು ಹೋದರೂ ಸ್ಪಂದಿಸಿಲ್ಲ.
* ಜಿಲ್ಲಾಧಿಕಾರಿಗೆ ಮನವಿ ಪತ್ರ
ವಿದ್ಯುತ್ ಉತ್ಪಾದನೆಗಾಗಿ ನಮ್ಮ ಪಾಲಕರು ಭೂಮಿಯನ್ನು ಕೊಟ್ಟಿದ್ದಾರೆ. ಈಗ ನಮಗೆ ಮಾಡಲು ಬೇರೆ ಕೆಲಸವೂ ಇಲ್ಲ, ಭೂಮಿಯೂ ಇಲ್ಲ. ನಮ್ಮ ವಿದ್ಯಾಭ್ಯಾಸದ ಆಧಾರದಲ್ಲಿ ಬೇರೆ ಕಡೆಗೆ ಉದ್ಯೋಗ ಅರಸಲು ಹೆಚ್ಚಿನ ಸಮಯವೂ ನಮಗಿಲ್ಲ. ಈಗಾಗಲೇ ನಮ್ಮ ನೇಮಕಾತಿ ವಯಸ್ಸು ಮೀರುತ್ತಿದೆ. ಹೀಗಾಗಿ ಸಾವೊಂದೇ ನಮಗಿರುವ ಮಾರ್ಗವಾಗಿದೆ. ಎನ್ಟಿಪಿಸಿ ಅಧಿಕಾರಿಗಳು ಅರ್ಹರಿಗೆ ಅವಕಾಶ ಕಲ್ಪಿಸದೆ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾರೆ. ಇದನ್ನು ತಾವು ಕೂಡಲೇ ಪರಿಶೀಲಿಸಿ ಭೂ ಸಂತ್ರಸ್ತರ ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಜಯ ಹೂಗಾರ, ಈರಪ್ಪ ಕಾಗಲ್, ಭೀಮನಗೌಡ ಬಿರಾದಾರ, ಹನುಮಂತ ಪಡಸಲಗಿ, ಮೋಹನಗೌಡ ಪಾಟೀಲ, ಸಲೀಂ ಇನಾಮದಾರ, ಸಿದ್ದಪ್ಪ ಮೇಲಿನಮನಿ, ಗುರುರಾಜ ಅಂಗಡಿ, ಪ್ರವಿಣ ವಾಲಿಕಾರ, ಸುನೀಲ ನಾಯಕ, ಸಚಿನ್ ಹಡಪದ, ಮಹಾಂತೇಶ ಬಿಷ್ಟಗೊಂಡ, ದಸಗೀರ ನದ್ಾ, ಪ್ರಮೋದ ಚವ್ಹಾಣ, ಶರಣಬಸು ಹೂಗಾರ ಮತ್ತಿತರರು ಇದ್ದರು.