ಜಿಲ್ಲೆ

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಜೋಳ ವಶ

ರಾಣೆಬೆನ್ನೂರ: ಅಕ್ರಮವಾಗಿ ಪಡಿತರ ಜೋಳ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಅದರಲ್ಲಿದ್ದ 39 ಸಾವಿರ ರೂ. ಮೌಲ್ಯದ 16 ಕ್ವಿಂಟಾಲ್​ ಜೋಳ ವಶಪಡಿಸಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

ನಗರದ ಕರಬಸಪ್ಪ ಶಿವಯೋಗೇಪ್ಪ ಹಾದರಹಳ್ಳಿ ಮತ್ತು ಜಮಾಲ್​ ಸಂಶುದ್ದಿನ್​ ಸುನ್ನರಖಾನ ಎಂಬುವರು ಅಶೋಕ ಲೈಲ್ಯಾಂಡ್​ ವಾಹನದಲ್ಲಿ ಅಕ್ರಮವಾಗಿ ಪಡಿತರ ಜೋಳ ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕ ಶಂಭುಲಿಂಗ ಸೋಮನಹಳ್ಳಿ ವಾಹನ ಜಪ್ತಿ ಮಾಡಿ ಪಡಿತರ ಜೋಳ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.