ಕೊಪ್ಪಳ: ಜನ ವಸತಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಸ್ಥಳಗಳ ಮೇಲೆ ಗುರುವಾರ ತಹಸೀಲ್ದಾರ್ ವಿಠ್ಠಲ ಚೌಗಲಾ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಮೂರು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಇರಕಲ್ ಗಡಾ ಗ್ರಾಮದಲ್ಲಿ ಎರಡು ಕಡೆಗಳಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಿಡಲಾಗಿತ್ತು. ಒಂದು ಕಡೆ 2.65 ಲಕ್ಷ ರೂ. ಮೌಲ್ಯದ 135 ಕೆಜಿ, ಮತ್ತೊಂದೆಡೆ 55.65 ಲಕ್ಷ ರೂ. ಮೌಲ್ಯದ 40 ಕೆಜಿ ಪಟಾಕಿ ವಶಕ್ಕೆ ಪಡೆಯಲಾಗಿದೆ.
ಕಿಡದಾಳ ಗ್ರಾಮದ ಗೋಡೌನ್‌ನಲ್ಲಿ ಮುಚ್ಚಿಟ್ಟಿದ್ದ 2.24 ಕೋಟಿ ರೂ. ಮೌಲ್ಯದ 7240 ಕೆಜಿ ಪಟಾಕಿಗಳನ್ನು ಪತ್ತೆ ಮಾಡಲಾಗಿದೆ. ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿ, ಸಂಗ್ರಹ ಕೊಠಡಿಗಳನ್ನು ಸೀಜ್ ಮಾಡಲಾಯಿತು. ತಾಪಂ ಇಒ ದುಂಡಪ್ಪ ತುರಾದಿ, ಸಿಪಿಐ ಮಹಾಂತೇಶ ಸಜ್ಜನ, ಪಿಡಿಒ ಬೆಟದಪ್ಪ, ಗ್ರಾಮ ಲೆಕ್ಕಾಧಿಕಾರಿ ಆಸೀಪ್ ಇತರರು ಇದ್ದರು.