ಸಾಂದರ್ಭಿಕ ಚಿತ್ರ 
ಜಿಲ್ಲೆ

ಮರಳು ಅಕ್ರಮ ಸಾಗಾಟ ಲಾರಿ ಜಪ್ತಿ

ಇಂದಿರಾ ಎನ್ ಕೆ

ಪಡುಬಿದ್ರಿ: ಮರಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಪಡುಬಿದ್ರಿ ಠಾಣೆ ಪೊಲೀಸರು ಹೆಜಮಾಡಿ ಚೆಕ್ ಪೋಸ್ಟ್ ಬಳಿ ಬುಧವಾರ ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ. ಚೆಕ್‌ಪೋಸ್ಟ್ ಬಳಿ ಹೆಜಮಾಡಿ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಲಾರಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಮರಳು ತುಂಬಿರುವುದು ಗೊತ್ತಾಗಿದೆ.

ಚಾಲಕ ಪಕ್ಷಿಕೆರೆ ಚಂದ್ರಶೇಖರ ಅವರಲ್ಲಿ ವಿಚಾರಿಸಿದಾಗ ಲಾರಿ ಮಾಲೀಕ ಬಾಲಕೃಷ್ಣ ಅವರೊಂದಿಗೆ ಉತ್ತರ ಭಾರತ ದ 5 ಜನ ಕಾರ್ಮಿಕರ ಸಹಾಯದಿಂದ ಸಂಕಲಕರಿಯ ಬಳಿ ಹೊಳೆಯಿಂದ ಕಳವು ಮಾಡಿ ಕಾಪುವಿನತ್ತ ಮಾರಾಟ ಮಾಡಲು ಕೊಂಡುಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಲಾರಿಯಲ್ಲಿ ಮರಳು ಸಾಗಾಟ ಬಗ್ಗೆ ಯಾವುದೇ ಪರವಾನಗಿ ಇಲ್ಲದಿದ್ದು, ಲಾರಿ ಚಾಲಕ ಚಂದ್ರಶೇಖರ್ ಹಾಗೂ ಮಾಲೀಕ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.