ಜಿಲ್ಲೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ವಶ

Haveri - Kariyappa Aralikatti

ಸವಣೂರ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್​ ಲಾರಿಯನ್ನು ತಾಲೂಕಿನ ಹುಲಗೂರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು ಓರ್ವ ವಿದ್ಯಾಥಿರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆ ಶಿಹರಟ್ಟಿ ತಾಲೂಕಿನ ಗೋವನಕೊಪ್ಪ ಗ್ರಾಮದ ಮೈಲಾರಪ್ಪ ಮಂಜಪ್ಪ ದೊಡ್ಡಮನಿ (19) ಹಾಗೂ

ಹಾವೇರಿ ತಾಲೂಕಿನ ಹಾಲಗಿಮರೋಳ ಗ್ರಾಮದ ದೇವರಾಜ ಹನುಮಂತಪ್ಪ ಹರಿಜನ (35), ಸದಾ ಸೋಮಪ್ಪ ಮೇಳಗಮನಿ (29) ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರು ತುಂಗಭದ್ರಾ ನದಿಪಾತ್ರದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಕಾರಡಗಿ ಬಳಿ ಪೊಲೀಸರು ತಪಾಸಣೆ ನಡೆಸಿ ವಾಹನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹುಲಗೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.