ಜಿಲ್ಲೆ

ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಖಾಸಗಿ ವಾಹನದಲ್ಲಿ ತೆರಳಿ ದಾಳಿ ಮಾಡಿದ ಡಿಸಿ

Uttara Kannada - Subash Hegde

ಕಾರವಾರ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಹೊನ್ನಾವರ ಶರಾವತಿ ನದಿ ದಂಡೆಯ ಮೇಲೆ ಭಾನುವಾರ ತಡ ರಾತ್ರಿಯವರೆಗೆ ಸಂಚರಿಸಿ ಅಕ್ರಮ ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳನ್ನು ಗುರುತಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ತಹಸೀಲ್ದಾರರಿಗೂ ಮಾಹಿತಿ ನೀಡದೇ ಖಾಸಗಿ ವಾಹನದಲ್ಲಿ ತೆರಳಿ ಹೊನ್ನಾವರ ತಾಲೂಕಿನ ಉಪ್ಪೋಣಿ, ಹೈಗುಂದ, ಬೇರಂಕಿ ಗ್ರಾಮಗಳಲ್ಲಿ ತಪಾಸಣೆ ನಡೆಸಿದರು. ಸಾಕಷ್ಟು ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಸಿರುವುದು ಕಂಡುಬಂದಿದೆ. ಸ್ಥಳೀಯ ಪೊಲೀಸ್ ಅಽಕಾರಿಗಳಿಗೆ ಅದನ್ನು ಕಾಯುವಂತೆ ತಿಳಿಸಲಾಗಿದೆ. ಸೋಮವಾರ ಬೆಳಗ್ಗೆ ಗಣಿ ಇಲಾಖೆ ಅಽಕಾರಿಗಳಿಗೆ ಮಾಹಿತಿ ನೀಡಿ ಮರಳು ವಶಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿದ್ದ ಮರಳಿನ ಬೆಲೆ ನಿಯಂತ್ರಿಸುವ ಸಲುವಾಗಿ ೪ ನದಿಗಳಲ್ಲಿ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಅದರ ಹೊರತಾಗಿಯೂ ಅಕ್ರಮ ಮರಳುಗಾರಿಕೆ ನಡೆಸಿದರೆ ಅದನ್ನು ಸಹಿಸುವುದಿಲ್ಲ. ನಿಯಮ ಮೀರಿದ ಎಲ್ಲರ ಮೇಲೆ ಕಠಿಣ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.